ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಮೈಸೂರು

ನಮೋ ರಥಕ್ಕೆ ಸ್ವಾಗತ

Rashmi Kasaragodu
Updated On : 18 Feb 2014, 2:23 am

ನಂಜನಗೂಡು: ದೇಶದ ಉದ್ದಗಲಕ್ಕೂ ಸಂಚರಿಸುತ್ತಿರುವ ನಮೋ ರಥ ಗುಂಡ್ಲುಪೇಟೆಯಿಂದ ನಂಜನಗೂಡಿಗೆ ಆಗಮಿಸಿತು.
ರಥವನ್ನು ಚಿಂತಾಮಣಿ ಗಣಪತಿ ದೇವಾಲಯ ಸಮೀಪ ಮಾಜಿ ಶಾಸಕ ಎ.ಆರ್. ಕೃಷ್ಣಮೂರ್ತಿ, ರಾಜ್ಯ ಸ್ಲಂ ಮೋರ್ಚ ಉಪಾಧ್ಯಕ್ಷ ಎಸ್. ಮಹದೇವಯ್ಯ ಸೇರಿದಂತೆ ಬಿಜೆಪಿ ಹಾಗೂ ನಮೋ ಬ್ರಿಗೇಡ್ ಮುಖಂಡರು ಹಾರ ಹಾಕುವ ಮೂಲಕ ಭವ್ಯ ಸ್ವಾಗತ ಕೋರಿದರು.
ನಮೋ ಬ್ರಿಗೇಡ್ ರಥ ಪಟ್ಟಣದಾಧ್ಯಂತ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಶ್ರೀ ಕಂಠೇಶ್ವರಸ್ವಾಮಿ ದೇವಾಲಯದ ಮುಂಭಾಗ ಅಂತ್ಯಗೊಂಡು ಅಲ್ಲಿಂದ ಮೈಸೂರಿಗೆ ತೆರಳಿತು. ಮಾಜಿ ಶಾಸಕ ಎ.ಆರ್. ಕೃಷ್ಣಮೂರ್ತಿ ಮಾತನಾಡಿ, ನಮೋ ಬ್ರಿಗೇಡ್ ಒಂದು ಪಕ್ಷಕ್ಕೆ ಸೀಮಿತವಲ್ಲ. ದೇಶದ ಅಭಿವೃದ್ಧಿ ಹಾಗೂ ಭವಿಷ್ಯದ ದೃಷ್ಟಿಯಿಂದ ನರೇಂದ್ರ ಮೋದಿ ಅವರನ್ನು ದೇಶದ ಮುಂದಿನ ಪ್ರಧಾನಿಯಾಗಿ ಮಾಡುವುದೇ ನಮ್ಮ ಗುರಿ ಎಂದರು.
ಮುಂಖಡರಾದ ಎನ್.ಆರ್. ಕೃಷ್ಣಪ್ಪಗೌಡ, ಜಿಪಂ ಸದಸ್ಯರಾದ ಡಾ. ಶಿವರಾಂ, ಚಿಕ್ಕರಂಗನಾಯ್ಕ, ಗುರುಪಾದ, ಪ್ರೇಮ, ನಾಗಮ್ಮ, ಪುರಸಭಾ ಸದಸ್ಯ ಆನಂದ್, ಪುರುಷೋತ್ತಮ್, ಕಿರಾತಾರ್ಜುನ ಮೂರ್ತಿ, ವಾಲ್ಟರ್ ಬುತೇಲೋ, ಸಂಜಯ್ ಶರ್ಮ, ಕಪಿಲೇಶ್, ಚಂದನ್, ಶಂಕರ್, ಮುದ್ದಮಲ್ಲೇಶ್, ಮಂಜುನಾಥ್, ಬಸವಣ್ಣ, ಶಾಸ್ತ್ರಿ, ಆಕಲ ಮಹದೇವಪ್ಪ, ಇಲಿಯಾಸ್ ಅಹಮಾದ್, ಪುಟ್ಟಸ್ವಾಮಿ, ಜಯರಾಂ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement