ಬಂಡಿ ಜಾತ್ರೋತ್ಸವ
ಬನ್ನೂರು: ಪಟ್ಟಣದ ಶ್ರೀ ಹೇಮಾದ್ರಾಂಭ ದೇವಿ ಬಂಡಿ ಜಾತ್ರಾ ಮಹೋತ್ಸವವು ಸಹಸ್ರಾರು ಭಕ್ತರ ಸಮ್ಮುಖದಲ್ಲಿ ಶುಕ್ರವಾರ ಸಂಭ್ರಮದಿಂದ ಜರುಗಿತು. ಜಾತ್ರಾ ಮಹೋತ್ಸವದಲ್ಲಿ ಭಕ್ತರು ತಮ್ಮ ಎತ್ತುಗಳನ್ನು, ಮರದ ಬಂಡಿಗಳನ್ನು ಶೃಂಗರಿಸಿ ಹಾಲಿನ ಡೇರಿ ಮುಂಭಾಗ ನಿಲ್ಲಿಸಿದರು. ನಂತರ ಸಹಸ್ರಾರು ಬಂಡಿ ಎತ್ತುಗಳನ್ನು ಓಡಾಡಿಸಲಾಯಿತು.
ಜಿಲ್ಲೆಯ ವಿವಿಧ ಗ್ರಾಮಗಳಿಂದ ಆಗಮಿಸಿದ ಭಕ್ತರು ಎತ್ತಿನ ಬಂಡಿ ಓಟವನ್ನು ವೀಕ್ಷಿಸಿ ಸಂಭ್ರಮಿಸಿದರು. ಗ್ರಾಮದ ಸರ್ವ ಧರ್ಮೀಯರು ಒಳಗೊಂಡಂತೆ ಶ್ರೀ ಹೇಮಾದ್ರಾಂಬ ದೇವಿ ಜಾತ್ರೆ ಮುಗಿಯುವ ತನಕ ಮಾಂಸ ಮಾರಾಟ ನಿಷೇಧ ಮಾಡಲಾಗಿದೆ.
ಬಂಡಿ ಹರಿದು ವೃದ್ಧ ಸಾವು: ಎತ್ತಿನ ಬಂಡಿ ಓಟ ವೀಕ್ಷಿಸಿಸುತ್ತಿದ್ದ ಹೋಬಳಿಯ ಬೀಡನಹಳ್ಳಿ ಗ್ರಾಮದ ತಿಬ್ಬೇಗೌಡ (70) ಬಂಡಿ ಹರಿದು, ಚಿಕಿತ್ಸೆ ಫಲಕಾರಿಯಾಗದೇ ಸರ್ಕಾರಿ ಅಸ್ಪತ್ರೆಯಲ್ಲಿ ಕೊನೆ ಉಸಿರೆಳೆದರು.