ಮಾ.3ರಿಂದ ಶ್ರೀ ಉತ್ತೂರಮ್ಮ ಕುಂಭಾಭಿಷೇಕ
ಮೈಸೂರು: ಶ್ರೀರಂಗಪಟ್ಟಣ ತಾಲೂಕಿನ ಚಿಕ್ಕಅಂಕನಹಳ್ಳಿಯ ಶ್ರೀ ಉತ್ತೂರಮ್ಮ ಸೇವಾ ಸಮಿತಿ ವತಿಯಿಂದ ಮಾ.3 ರಿಂದ 5 ರವರೆಗೆ ಶ್ರೀ ಉತ್ತೂರಮ್ಮ (ವಲ್ಮೀಕಾಂಬಾ) ಪುನರ್ ಪ್ರತಿಷ್ಠಾಪನೆ, ಕುಂಭಾಭಿಷೇಕ, ಉದ್ಘಾಟನಾ ಮಹೋತ್ಸವ ನಡೆಯಲಿದೆ.
ಮಾ.3ರ ಬೆಳಗ್ಗೆ 9.45ಕ್ಕೆ ಅಗ್ರತೀರ್ಥ ಸಂಗ್ರಹ ಸಮೇತ ಸವತ್ಸಧೇನು ಸಹಿತಯಾಗಶಾಲಾ ಪ್ರವೇಷ ಪ್ರವೇಶಬಲಿ, ಶೈವಪುಣ್ಯಾಹ, ಪಂಚಗವ್ಯಸಾಧನ, ಪ್ರೋಕ್ಷಣೆ, ದೇವತಾನಾಂದೀ, ರಕ್ಷಾಪೂಜೆ, ಋತ್ವಿಗ್ವರಣ, ರಕ್ಷಾಬಂಧನ, ಪ್ರತಿಮಾ ಶುದ್ಧಿ, ಹೋಮ, ಗಣಹೋಮ ನಡೆಯಲಿದೆ. ಸಂಜೆ 4ಕ್ಕೆ ಅಂಕುರಾರ್ಪಣ, ಜಲಾಧಿವಾಸ, ಕಲಶ ಸ್ಥಾಪನೆ, ಮೃತ್ಯುಂಜಯಸಹಿತ ನವಗ್ರಹಪೂಜೆ ಹೋಮ. ಮಾ.4ರ ಬೆಳಗ್ಗೆ 9 ಕ್ಕೆ ಪುಣ್ಯಾಹ, ಧಾನ್ಯಾಧಿವಾಸ, ಕಲಶ ಪೂಜೆ, ಹೋಮ ನೆರವೇರಲಿದೆ. ಫೆ. 5ರ ಬೆಳಗ್ಗೆ 9.45ಕ್ಕೆ ಮಹಾಪೂರ್ಣಾಹುತಿ ಸಂಯೋಜನೆ, ಕುಂಭೋಧ್ವಾಸನೆ, 10.15ಕ್ಕೆ ಕುಂಭಾಭಿಷೇಕ ಅಲಂಕಾರ ನಿರೀಕ್ಷಣೆ, ಮಹಾಹವಿರ್ ನಿವೇದನೆ ರಂಭಾವೃಕ್ಷ ಛೇದನೆ, ದರ್ಪಣ, ಕನ್ಯಾ, ಸವತ್ಸಧೇನು ದರ್ಶನ, ಮಧ್ಯಾಹ್ನ 12.30ಕ್ಕೆ ಮಹಾಮಂಗಳಾರತಿ ರಾಷ್ಟ್ರಾಶೀರ್ವಾದ, ತೀರ್ಥಪ್ರಸಾದ ವಿನಿಯೋಗವಾಗಲಿದೆ. ಮಾ.5ರ ಮಧ್ಯಾಹ್ನ 12ಕ್ಕೆ ಧಾರ್ಮಿಕ ಸಭೆಯಲ್ಲಿ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ, ನಿರ್ಮಲಾನಂದನಾಥ ಸ್ವಾಮೀಜಿ, ಮಹಂತ ಸ್ವಾಮೀಜಿ, ಸೋಮನಾಥ ಸ್ವಾಮೀಜಿ ಸಾನ್ನಿಧ್ಯ ವಹಿಸುವರು. ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ಕಾರ್ಯಕ್ರಮ ಉದ್ಘಾಟಿಸುವರು. ಶಾಸಕ ಎ.ಬಿ. ರಮೇಶ್ಬಾಬು ಬಂಡಿಸಿದ್ದೇಗೌಡ ಅಧ್ಯಕ್ಷತೆ ವಹಿಸುವರು. ಮುಖ್ಯ ಅತಿಥಿಗಳಾಗಿ ಸಚಿವರಾದ ಅಂಬರೀಷ್, ಎಚ್.ಎಸ್. ಮಹದೇವಪ್ರಸಾದ್, ವಿ. ಶ್ರೀನಿವಾಸಪ್ರಸಾದ್, ಸಂಸದರಾದ ರಮ್ಯಾ, ಎಚ್. ವಿಶ್ವನಾಥ್ ಭಾಗವಹಿಸುವರು.