ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಮೈಸೂರು

ಲೋಕಸತ್ತಾ ಸಂಘಟನೆ: ನಿರ್ಣಯ

Rashmi Kasaragodu
Updated On : 18 Feb 2014, 2:24 am

ಮೈಸೂರು: ಇತ್ತೀಚೆಗೆ ನಡೆದ ಲೋಕಸತ್ತಾ ಪಕ್ಷದ ಸಭೆಯಲ್ಲಿ ಮುಖಂಡರು ಹಲವು ನಿರ್ಣಯಗಳನ್ನು ಕೈಗೊಂಡರು. ಸದ್ಯದ ಪರಿಸ್ಥಿತಿಯಲ್ಲಿ ಆಮ್ ಆದ್ಮಿ ಪಕ್ಷದೊಂದಿಗೆ ಮೈತ್ರಿ ಮಾಡಿಕೊಳ್ಳದ ಹಿನ್ನೆಲೆಯಲ್ಲಿ ಪಕ್ಷವನ್ನು ತನ್ನದೇ ಆದ ವಿಶಿಷ್ಟ ರೀತಿಯಲ್ಲಿ ಕಟ್ಟಿ ಬೆಳೆಸುವುದು. ರಾಜಕೀಯ ಮತ್ತು ಸಮಾಜ ಸೇವೆ ಎರಡನ್ನೂ ಒಟ್ಟಿಗೆ ನಡೆಸುವುದು. ಜನಸಾಮಾನ್ಯರಿಗೆ ವಿಜ್ಞಾನ, ತಂತ್ರಜ್ಞಾನ, ಆಡಳಿತ ಮುಂತಾದ ವಿಷಯಗಳ ಅವಶ್ಯಕತೆ ಮತ್ತು ಪ್ರಯೋಜನಗಳನ್ನು ತಿಳಿಸುವುದು. ಮೈಸೂರಿನ ಪ್ರತಿ ವಾರ್ಡ್ನಲ್ಲಿ ಸಾಮಾಜಿಕ ಕಾರ್ಯಕ್ರಮ ರೂಪಿಸುವುದು. ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸುವ ಸಂಬಂಧ ಶೀಘ್ರದಲ್ಲಿಯೇ ತೀರ್ಮಾನ ಕೈಗೊಳ್ಳುವ ಬಗ್ಗೆ ನಿರ್ಣಯ ಮಂಡಿಸಲಾಯಿತು ಎಂದು ಸಂಚಾಲಕ ಸಿ.ಕೆ. ನವೀನ್ ತಿಳಿಸಿದ್ದಾರೆ.

ಸೇಂಟ್ ಜೋಸೆಫ್ಗೆ ಜಯ
ಮೈಸೂರು: ಕೆಎಸ್ಸಿಎ ಆಯೋಜಿಸಿದ್ದ ಅಂತರ ಕಾಲೇಜು ಕ್ರಿಕೆಟ್ ಪಂದ್ಯಾವಳಿಯಲ್ಲಿ ಸೇಂಟ್ ಜೋಸೆಫ್ ಪ್ರಥಮ ದರ್ಜೆ ಕಾಲೇಜು ತಂಡ, ವಿದ್ಯಾಶ್ರಮ ಪ್ರಥಮ ದರ್ಜೆ ಕಾಲೇಜು ತಂಡವನ್ನು 67 ರನ್ಗಳಿಂದ ಮಣಿಸಿದೆ. ಎಸ್ಜೆಸಿಇ ಮೈದಾನದಲ್ಲಿ ನಡೆದ ಪಂದ್ಯಾವಳಿಯಲ್ಲಿ ಸೇಂಟ್ ಜೋಸೆಫ್ ಪ್ರಥಮ ದರ್ಜೆ ಕಾಲೇಜು ತಂಡ 44 ಓವರ್ಗಳಿಗೆ 189 ರನ್ ಗಳಿಸಿತು. ತಂಡದ ಪರ ಅಭಿಜೀತ್ (42), ಅರುಣ್ಕುಮಾರ್ (47) ರನ್ ಗಳಿಸಿದರು. ಇದಕ್ಕೆ ಪ್ರತಿಯಾಗಿ ವಿದ್ಯಾಶ್ರಮ ತಂಡ ತನ್ನೆಲ್ಲ ವಿಕೆಟ್ ಕಳೆದುಕೊಂಡು ಕೇವಲ 122 ರನ್ ಗಳಿಸಿತು.



ಅಮರನಾಥ್ಗೆ ಪ್ರಶಸ್ತಿ
ಮೈಸೂರು: ರೋಟರಿ ಮೈಸೂರು ಮಿಡ್ಟೌನ್ ಸಂಸ್ಥೆಯು ಫೆ.19ರ ಸಂಜೆ 7ಕ್ಕೆ ಜೆಎಲ್ಬಿ ರಸ್ತೆಯ ರೋಟರಿ ಸೆಂಟ್ರಲ್ ಸಭಾಂಗಣದಲ್ಲಿ ರೋಟರಿ ಮಿಡ್ಟೌನ್ ಕ್ರೀಡಾ ಪ್ರಶಸ್ತಿ- 2014 ನೀಡುತ್ತಿದೆ. ಅಂತಾರಾಷ್ಟ್ರೀಯ ಅಥ್ಲೆಟ್ ಹಾಗೂ ಪೊಲೀಸ್ ಪೇದೆ ಸಿ.ಎಸ್. ಅಮರನಾಥ್ ಅವರಿಗೆ ಈ ಸಾಲಿನ ರೋಟರಿ ಮಿಡ್ಟೌನ್ ಕ್ರೀಡಾ ಪ್ರಶಸ್ತಿ- 2014 ನೀಡುತ್ತಿದೆ. ಮಾಜಿ ಮೇಯರ್ ಎನ್. ಪ್ರಕಾಶ್ ಪ್ರಶಸ್ತಿ ಪ್ರದಾನ ಮಾಡುವರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement