ಶೌರ್ಯಪ್ರಶಸ್ತಿ ವಿಜೇತ ಮನೋಜ್ಗೆ ಸನ್ಮಾನ
ಸಾಲಿಗ್ರಾಮ: ಗ್ರಾಮದ ಶ್ರೀ ಭೈರವೇಶ್ವರ ವಿದ್ಯಾಸಂಸ್ಥೆಯ 19ನೇ ವಾರ್ಷಿಕೋತ್ಸವದಲ್ಲಿ ಸಂಸ್ಥೆಯ ಹಳೆಯ ವಿದ್ಯಾರ್ಥಿ ಹಾಗೂ ರಾಜ್ಯ, ರಾಷ್ಟ್ರ ಶೌರ್ಯ ಪ್ರಶಸ್ತಿ ಪಡೆದ ಎಸ್.ಎಸ್. ಮನೋಜ್ನನ್ನು ಸನ್ಮಾನಿಸಲಾಯಿತು. ಕಾರ್ಯಕ್ರಮದಲ್ಲಿ ಗುರುರಾಘವೇಂದ್ರ ಗೃಹ ನಿರ್ಮಾಣ ಸಹಕಾರ ಸಂಘದ ಅಧ್ಯಕ್ಷ ಸಾ.ರಾ. ನಂದೀಶ್, ಜವಾಹರ್ ನವೋದಯ ವಿದ್ಯಾಲಯದ ನಿವೃತ್ತ ಪ್ರಾಂಶುಪಾಲ ಸಿದ್ದರಾಮೇಗೌಡ, ವಿದ್ಯಾಸಂಸ್ಥೆಯ ಗೌವಾಧ್ಯಕ್ಷೆ ಎಚ್.ಆರ್. ಕಮಲಮ್ಮ, ಗ್ರಾಪಂ ಅಧ್ಯಕ್ಷ ಎಸ್.ಕೆ. ರಾಣಿರಾಜಣ್ಣ, ಗ್ರಾಪಂ ಸದಸ್ಯ ಎಸ್.ಎಸ್. ಜವರೇಗೌಡ, ಶಿಕ್ಷಣ ಸಂಯೋಜಕ ಟಿ.ಕೆ. ನಾಗೇಶ್, ಮುಖ್ಯ ಶಿಕ್ಷಕ ಎ.ಪಿ. ಪಾಂಡುಕುಮಾರ್ ಗುಣಚಂದ್ರಕುಮಾರ್, ಮಂಚೇಗೌಡ, ಎಸ್.ಕೆ. ರಮೇಶ್, ಎಸ್.ಆರ್. ವೆಂಕಟೇಶ್, ಶ್ರೀಕಾಂತ್ ಹೊನ್ನವಳ್ಳಿ ಕೃಷ್ಣ ಭಾಗವಹಿಸಿದ್ದರು.