ಸ್ತನ ಕ್ಯಾನ್ಸರ್ ಕುರಿತು ಉಪನ್ಯಾಸ
ಮೈಸೂರು: ಶ್ರೀ ಚಾಮರಾಜೇಂದ್ರ ಎಂಜಿನಿಯರಿಂಗ್ ಕಾಲೇಜಿನ ಜೈವಿಕ ತಂತ್ರಜ್ಞಾನ ವಿಭಾಗವು ಸೋಮವಾರ ಸ್ತನ ಕ್ಯಾನ್ಸರ್- ಕಾರಣ, ಪತ್ತೆ ಹಚ್ಚುವಿಕೆ ಮತ್ತು ಚಿಕಿತ್ಸೆ ಕುರಿತು ಸಂಶೋಧನ ಉಪನ್ಯಾಸ ಆಯೋಜಿಸಿತ್ತು. ಕಾಲೇಜಿನ ಸಿಎಸ್, ಐಎಸ್ ಬ್ಲಾಕ್ನ ಸಮ್ಮೇಳನ ಸಭಾಂಗಣದಲ್ಲಿ ನಡೆದ ಈ ಉಪನ್ಯಾಸ ಕಾರ್ಯಕ್ರಮದಲ್ಲಿ ಸಿಂಗಾಪುರದ ರಾಷ್ಟ್ರೀಯ ವಿವಿಯ ಸಂಶೋಧನಾ ಪ್ರಾಧ್ಯಾಪಕ ನೊಕಿ ಯಮಮೊಟೊ ಸ್ತನಕ್ಯಾನ್ಸರ್ನ ಕಾರಣಗಳು ಮತ್ತು ಚಿಕಿತ್ಸಾ ಪದ್ಧತಿ ಕುರಿತು ಮಾತನಾಡಿದರು.ಜೆಎಸ್ಎಸ್ ವೈದ್ಯಕೀಯ ಕಾಲೇಜಿನ ಸಹಾಯಕ ಪ್ರಾಧ್ಯಾಪಕ ಡಾ. ಸುಧಾ ಕಿರಣ್ದಾಸ್ ಮುಖ್ಯ ಅತಿಥಿಯಾಗಿ ಆಗಮಿಸಿದ್ದರು. ಎಸ್ಜೆಸಿಇ ಪ್ರಾಂಶುಪಾಲ ಪ್ರೊ.ಸೈಯದ್ ಶಕೀಬ್ಉರ್ ರೆಹಮಾನ್ ಅಧ್ಯಕ್ಷತೆ ವಹಿಸಿದ್ದರು. ಜೈವಿಕ ತಂತ್ರಜ್ಞಾನ ವಿಭಾಗದ ಮುಖ್ಯಸ್ಥ ಡಾ.ಎನ್. ಹರಪ್ರಸಾದ್, ಸಿವಿಲ್ ಎಂಜಿನಿಯರಿಂಗ್ ವಿಭಾಗದ ಡಾ.ಎಸ್.ಕೆ. ಪ್ರಸಾದ್ ಇದ್ದರು.