ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಮೈಸೂರು

ಹೋಬಳಿಗೊಂದು ಕ್ರೀಡಾಂಗಣ

Rashmi Kasaragodu
Updated On : 18 Feb 2014, 2:23 am

ಕೆ.ಆರ್. ನಗರ: ಸರ್ಕಾರ ಹೋಬಳಿಗೊಂದು ಸುಸಜ್ಜಿತವಾಗಿ ಕ್ರೀಡಾಂಗಣ ನಿರ್ಮಿಸಿ ಕ್ರೀಡೆಗಳಿಗೆ ಉತ್ತೇಜನ ನೀಡಿದರೆ ಗ್ರಾಮಾಂತರ ಪ್ರದೇಶದ ಕ್ರೀಡಾಪಟುಗಳು ಜಿಲ್ಲೆ ಮತ್ತು ರಾಜ್ಯ ಮಟ್ಟದಲ್ಲಿ ಉತ್ತಮ ಸಾಧನೆ ಮಾಡಲು ಸಾಧ್ಯವಾಗುತ್ತದೆ ಎಂದು ತಾ. ಸರ್ಕಾರಿ ನೌಕರರ ಸಂಘದ ಉಪಾಧ್ಯಕ್ಷ ಹೊಸೂರು ಎ. ಕುಚೇಲ್ ಹೇಳಿದರು.
ತಾಲೂಕಿನ ಚುಂಚನಕಟ್ಟೆ ಸರ್ಕಾರಿ ಪ್ರೌಢಶಾಲೆಯಲ್ಲಿ ಇತ್ತೀಚೆಗೆ ನಡೆದ ಕ್ರೀಡಾ ದಿನೋತ್ಸವದಲ್ಲಿ ಮಾತನಾಡಿದ ಅವರು, ಸೂಕ್ತ ಪ್ರೋತ್ಸಾಹ ಮತ್ತು ಸಹಕಾರ ಇಲ್ಲದ ಕಾರಣ ಗ್ರಾಮಾಂತರ ಪ್ರದೇಶದ ಕ್ರೀಡಾಪಟುಗಳು ಪಟ್ಟಣ ಮತ್ತು ನಗರ ಪ್ರದೇಶದ ಕ್ರೀಡಾಪಟುಗಳೊಂದಿಗೆ ಸ್ಪರ್ಧಿಸಲು ಸಾಧ್ಯವಾಗದೆ ಅವರಲ್ಲಿರುವ ಪ್ರತಿಭೆಗಳು ಹೊರಬರುತ್ತಿಲ್ಲ ಎಂದು ವಿಷಾದಿಸಿದರು.
ಇದೇ ವೇಳೆ ವಿವಿಧ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸುತ್ತಿರುವ ಹೊಸೂರು ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷ ಬಿ.ರಮೇಶ್, ಪತ್ರಕರ್ತರ ಸಂಘದ ಉಪಾಧ್ಯಕ್ಷ ವಿನಯ್ ದೊಡ್ಡಕೊಪ್ಪಲು, ಮಾವತ್ತೂರು ಸರ್ಕಾರಿ ಪ್ರೌಢಶಾಲೆಯ ಮುಖ್ಯಶಿಕ್ಷಕ ಎಚ್.ಎಸ್. ನಾಗೇಂದ್ರ ಸಿ.ಕೆ. ನಾಗರಾಜ್, ವಿಮಲಾಂಭ ಸುಧಾಮಣಿ, ಸಿ.ಆರ್. ಸತ್ಯನಾರಾಯಣ, ಎಸ್ಡಿಎಂಸಿ ಅಧ್ಯಕ್ಷ ಸಿ.ಎಸ್. ಲೋಕೇಶ್, ಡಾ. ಜನಾರ್ಧನ್ ಭಟ್, ಮುಖ್ಯ ಶಿಕ್ಷಕ ಜಿ.ಟಿ. ರಾಮೇಗೌಡ, ಶಿಕ್ಷಕರಾದ ಉದಯಕುಮಾರ್, ಶಶಿಧರ್, ಜಗದೀಶ್, ಮಲಿಯಪ್ಪ, ಕೊಟ್ರಪ್ಪ, ತಿಮ್ಮರಾಯಪ್ಪ, ಅಶೋಕ್, ಚಕ್ರಪಾಣಿ, ರೇಣುಕಾ, ಅಶ್ವಿನಿ, ನಾಗರಾಜ್, ಹರೀಶ್, ಎಸ್ಡಿಎಂಸಿ ಸದಸ್ಯ ಎಚ್.ಎಲ್. ಆನಂದ್, ರಾಜು,  ಗೌರಮ್ಮ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement