ಕ್ಯಾಂಪಸ್ ಸಂದರ್ಶನ; 23 ಮಂದಿ ಆಯ್ಕೆ
ಮೈಸೂರು: ನಗರದ ಬನ್ನೂರು ರಸ್ತೆಯಲ್ಲಿರುವ ಎಟಿಎಂಇ ತಾಂತ್ರಿಕ ಕಾಲೇಜಿನ 23 ವಿದ್ಯಾರ್ಥಿಗಳು ಕ್ಯಾಂಪಸ್ ಸಂದರ್ಶನದಲ್ಲಿ ಆಯ್ಕೆಯಾಗಿದ್ದಾರೆ.
ಎಟಿಎಂಇ ಕಾಲೇಜ್ ಆಫ್ ಎಂಜಿನಿಯರಿಂಗ್ ನಾಲ್ಕನೇ ವರ್ಷಕ್ಕೆ ಪಾದಾರ್ಪಣೆ ಮಾಡಿದ್ದು, ಅಂತಿಮ ವರ್ಷದ ವಿದ್ಯಾರ್ಥಿಗಳು ಜುಲೈನಲ್ಲಿ ಎಂಜಿನಿಯರಿಂಗ್ ಪದವಿ ಪೂರೈಸುವರು.
ಅಂತಿಮ ವರ್ಷದಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ಬರೋಡ ಟೆಲಿಕಾಂ ಇಂಡಸ್ಟ್ರಿಯ ಸ್ಪೆಕ್ಟ್ರಮ್ ಪ್ಲಾನಿಂಗ್ ಸರ್ವಿಸಸ್ ತಮ್ಮ ಸಂಸ್ಥೆಗೆ ಎಂಜಿನಿಯರ್ಗಳನ್ನು ನೇಮಕ ಮಾಡಿಕೊಳ್ಳಲು ಪೂರ್ವಭಾವಿಯಾಗಿ ಎರಡು ದಿನಗಳ ಕಾಲ ಕಾಲೇಜಿನಲ್ಲಿ ನಡೆದ ಆಯ್ಕೆ ಪ್ರಕ್ರಿಯೆಯಲ್ಲಿ ಕಾಲೇಜಿನ ಎಲೆಕ್ಟ್ರಾನಿಕ್ಸ್ ಮತ್ತು ಕಮ್ಯುನಿಕೇಷನ್ ವಿಭಾಗದ 10 ವಿದ್ಯಾರ್ಥಿಗಳು, ಕಂಪ್ಯೂಟರ್ ಸೈನ್ಸ್ ವಿಭಾಗದ 9 ವಿದ್ಯಾರ್ಥಿಗಳು ಮತ್ತು ಎಲೆಕ್ಟ್ರಿಕಲ್ ಮತ್ತು ಎಲೆಕ್ಟ್ರಾನಿಕ್ಸ್ ವಿಭಾಗದ 4 ವಿದ್ಯಾರ್ಥಿಗಳು ಆಯ್ಕೆಯಾಗಿದ್ದಾರೆ.
ಸ್ಪೆಕ್ಟ್ರಮ್ ಪ್ಲಾನಿಂಗ್ ಸರ್ವಿಸಸ್ನ ಮಾನವ ಸಂಪನ್ಮೂಲ ಅಧಿಕಾರಿ ಹನೋಖ್ ಮಕ್ವಾನ್ ವಿದ್ಯಾರ್ಥಿಗಳೊಂದಿಗೆ ನಡೆಸಿದ ಸಂದರ್ಶನ ಕಾಲದಲ್ಲಿ ಎಟಿಎಂಇ ಕಾಲೇಜಿನ ವಿದ್ಯಾರ್ಥಿಗಳ ಶೈಕ್ಷಣಿಕ ಮಟ್ಟ, ಜ್ಞಾನ, ಸಾಮರ್ಥ್ಯ ಹಾಗೂ ಹೆಚ್ಚುವರಿ ತರಬೇತಿ ನೀಡಿರುವುದಕ್ಕಾಗಿ ಮೆಚ್ಚುಗೆ ವ್ಯಕ್ತಪಡಿಸಿದರು. ಆಯ್ಕೆಯಾದ ವಿದ್ಯಾರ್ಥಿಗಳಿಗೆ ಸಂಸ್ಥೆಯ ಅಧ್ಯಕ್ಷ ಎಲ್.ಅರುಣ್ಕುಮಾರ್, ಆಡಳಿತ ವರ್ಗ, ಪ್ರಾಂಶುಪಾಲ ಡಾ.ಎಲ್. ಬಸವರಾಜ್ ಹಾಗೂ ಶೈಕ್ಷಣಿಕ ವರ್ಗದವರು ಶುಭ ಹಾರೈಸಿದ್ದಾರೆ.