ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಮೈಸೂರು

ಚರ್ಮ ಕುಶಲ ಕಾರ್ಮಿಕರ ಧರಣಿ

Rashmi Kasaragodu
Updated On : 19 Feb 2014, 1:31 am

ಮೈಸೂರು: ನಗರದ ಸಯ್ಯಾಜಿರಾವ್ ರಸ್ತೆಯಲ್ಲಿರುವ ಲಿಡ್ಕರ್ ಮಾರಾಟ ಮಳಿಗೆ ಎದುರು ಫೆ.19ರ ಬೆಳಗ್ಗೆ 10ಕ್ಕೆ ಧರಣಿ ಹಮ್ಮಿಕೊಂಡಿರುವುದಾಗಿ ಡಾ. ಬಾಬು ಜಗಜೀವನ್ ರಾಮ್ ಚರ್ಮ ಕುಶಲ ಕಾರ್ಮಿಕರ ಸಂಘದ ಅಧ್ಯಕ್ಷ ಟಿ. ನಾರಾಯಣ ತಿಳಿಸಿದ್ದಾರೆ. ಲಿಡ್ಕರ್ ಮಾರಾಟ ಮಳಿಗೆಯ ವ್ಯವಸ್ಥಾಪಕ ಕುಮಾರ್ರಾಜ್ ಅವರು 4 ಲಕ್ಷ ದಾಸ್ತಾನು ಪಡೆದು ಮಾರಾಟ ಮಾಡಿದ್ದಾರೆ. ಆದರೆ, 2 ವರ್ಷಗಳಾದರೂ ಹಣ ನೀಡದೆ ಅಲೆಸುತ್ತಿದ್ದಾರೆ. ಸಂಬಂಧಪಟ್ಟ ಅಧಿಕಾರಿಗಳು ಸಹ ಈ ಬಗ್ಗೆ ಕ್ರಮ ಕೈಗೊಂಡಿಲ್ಲ. ಹೀಗಾಗಿ ಧರಣಿ ಹಮ್ಮಿಕೊಂಡಿರುವುದಾಗಿ ಟಿ. ನಾರಾಯಣ ತಿಳಿಸಿದ್ದಾರೆ.
ನೌಕರರ ಸಹಕಾರ ಸಂಘಕ್ಕೆ ಆಯ್ಕೆ
ಸರ್ಕಾರಿ ನೌಕರರ ಗೃಹ ನಿರ್ಮಾಣ ಸಹಕಾರ ಸಂಘಕ್ಕೆ 5 ವರ್ಷಗಳ ಅವಧಿಗೆ  ಆಡಳಿತ ಮಂಡಳಿ ನಿರ್ದೇಶಕರಾಗಿ ಮಹೇಶ್, ಎಂ. ಸೋಮಶೇಖರ್, ಎಂ. ಶಿವಮೂರ್ತಿ, ವಿ.ಸಿ. ವಿಶ್ವನಾಥ, ಕೆ.ಎನ್. ಅಣ್ಣೇಗೌಡ, ಬಿ.ಸಿ. ಲೋಕೇಶ್, ಡಾ. ರಾಮಲಿಂಗಯ್ಯ, ಎಚ್.ಎಂ. ಮಹದೇವಸ್ವಾಮಿ, ಎನ್. ನಾಗರಾಜು, ಕೆ.ಎಂ. ಗೋಪಮ್ಮ, ಪಿ. ಕಮಲಮ್ಮ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಸಂಘಕ್ಕೆ ಆಯ್ಕೆ
ನೇಕಾರರ ಗೃಹ ನಿರ್ಮಾಣ ಸಹಕಾರ ಸಂಘಕ್ಕೆ 5 ವರ್ಷಗಳ ಅವಧಿಗೆ ಆಡಳಿತ ಮಂಡಳಿಗೆ ನಿರ್ದೇಶಕರಾಗಿ ಎಚ್.ಎನ್. ಉಗ್ರಶೆಟ್ಟಿ, ಎ.ಎನ್. ರಮೇಶ್, ಆರ್. ನರಸಿಂಹಮೂರ್ತಿ, ಎನ್.ಜೆ. ಮಂಜುಳಾ, ಬಿ.ಎಂ. ಲತಾ ಮಹೇಶ್, ಎನ್. ರಾಮಕೃಷ್ಣ, ಜಿ.ಎನ್. ಮೂಡಲಗಿರಿಯಪ್ಪ, ಎಸ್.ಆರ್. ನಂಜಪ್ಪ, ಆರ್. ಪಾಂಡುಕುಮಾರ, ಜಿ. ಶ್ರೀನಿವಾಸ ಅವಿರೋಧ ಆಯ್ಕೆಯಾಗಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement