ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಮೈಸೂರು

ನಾಳೆ ಎಸ್ಆರ್ಕೆ ಸ್ಮರಣಾರ್ಥ ರಂಗಸರಿಗಮ

Rashmi Kasaragodu
Updated On : 19 Feb 2014, 1:27 am


ಮೈಸೂರು: ನಗರದ ರಂಗರತ್ನಾಕರ ಸಂಸ್ಥೆಯಿಂದ ಫೆ. 20ರಂದು ಜೆಎಲ್ಬಿ ರಸ್ತೆಯಲ್ಲಿರುವ ಶ್ರೀ ವಾಸುದೇವಾಚಾರ್ಯ ಭವನದಲ್ಲಿ ಕಲಾ ವಿಮರ್ಶಕ ಎಸ್.ಆರ್. ಕೃಷ್ಣಮೂರ್ತಿಅವರ ಸಂಸ್ಮರಣಾರ್ಥವಾಗಿ ರಂಗಸರಿಗಮ ಎಂಬ ವಿಶಿಷ್ಟ ಸಾಂಸ್ಕೃತಿಕ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಸಂಸ್ಥೆಯ ಅಧ್ಯಕ್ಷ ಕೆ.ಆರ್. ಲಕ್ಷ್ಮಿನಾರಾಯಣರಾವ್ ಮತ್ತು ಕಾರ್ಯದರ್ಶಿ ಎಚ್.ಎಸ್. ಗೋವಿಂದೇಗೌಡ ಹೇಳಿದ್ದಾರೆ. ಕಾರ್ಯಕ್ರಮದಲ್ಲಿ ರಂಗಸಂಗೀತಗಾರರಾದ ಕೇಂದ್ರ ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಪರಮಶಿವನ್, ಪುಟ್ಟಣ್ಣಯ್ಯ, ನಾಗರಾಜಾಚಾರ್, ಕಿರಗಸೂರು ರಾಜಪ್ಪ ಮತ್ತು ಕಾತ್ಯಾಯನಿ ಭಾಗವಹಿಸಿ ರಂಗಗೀತೆಗಳನ್ನು ಪ್ರಸ್ತುತಪಡಿಸುವರು. ಇವರೊಡನೆ ಕರ್ನಾಟಕ ಶಾಸ್ತ್ರೀಯ ಸಂಗೀತದ ಪರಸ್ಪರ ಕೃತಿಗಳನ್ನು ಪ್ರಸ್ತುತಗೊಳಿಸಲು ಸಂಗೀತ ವಿದುಷಿ ಡಾ.ಆರ್.ಎನ್. ಶ್ರೀಲತಾ ಮತ್ತು ಸಂಗೀತ ವಿದ್ವಾನ್ ಡಾ.ರಾ.ಸ. ನಂದಕುಮಾರ್ ಸೂಕ್ತ ಪಕ್ಕವಾದ್ಯದವರೊಡನೆ ಭಾಗವಹಿಸುವರು.


ಪವಾಡ ಬಯಲು ಕಾರ್ಯಕ್ರಮ
ಮೈಸೂರು: ಮೈಸೂರು ಸೈನ್ಸ್ ಫೌಂಡೇಷನ್ ಮತ್ತು ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತುಗಳ ಸಂಯುಕ್ತಾಶ್ರಯದಲ್ಲಿ ಪವಾಡಗಳ ಹಿಂದಿನ ವಿಜ್ಞಾನ ಪ್ರಾತ್ಯಕ್ಷಿಕೆ ಮತ್ತು ಸಂವಾದ ಕಾರ್ಯಕ್ರಮವು ಕಲಾಮಂದಿರದ ಮನೆಯಂಗಳದಲ್ಲಿ ನಡೆಯಿತು. ಸಂಪನ್ಮೂಲ ವ್ಯಕ್ತಿಗಳಾಗಿ ಎನ್. ಮಹದೇವಪ್ಪ, ಡಿ.ಎಸ್. ವೈಜಯಂತಿ ಮತ್ತು ಜಿ.ಬಿ. ಸಂತೋಷ್ಕುಮಾರ್ ಭಾಗವಹಿಸಿ, ಅನೇಕ ಸ್ವಯಂ ಘೋಷಿತ ಪವಾಡ ಪುರುಷರಿದ್ದು, ಅನೇಕ ರೀತಿಯ ಪ್ರಯೋಗಗಳನ್ನು ಮಾಡಿ ಇವುಗಳನ್ನು ಪವಾಡಗಳೆಂದು ಹೇಳುತ್ತಾರೆ. ವೈಜ್ಞಾನಿಕ ಮನೋಭಾವ ಬೆಳೆಸಿಕೊಳ್ಳದಿದ್ದರೆ ಇಂಥವರ ಮೋಸಕ್ಕೆ ಒಳಗಾಗಬೇಕಾಗುತ್ತದೆ ಎಂದು ತಿಳಿಸಿದರು. ಎಲ್ಲ ಪವಾಡಗಳನ್ನು ಸಂಪನ್ಮೂಲ ವ್ಯಕ್ತಿಗಳು ಒಂದೊಂದಾಗಿ ಮಾಡಿ ತೋರಿಸಿ, ಅವುಗಳ ಹಿಂದಿರುವ ವಿಜ್ಞಾನವನ್ನು ವಿವರಿಸಿದರು. ಫೌಂಡೇಷನ್ ಅಧ್ಯಕ್ಷ ಸಿ.ಕೃಷ್ಣೇಗೌಡ, ಜಗನ್ನಾಥ್ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement