ಬೇಡಿಕೆ ಈಡೇರಿಸಿ; ಅಂಚೆ ನೌಕರರ ಪ್ರತಿಭಟನೆ
ಪಿರಿಯಾಪಟ್ಟಣ: ಅಂಚೆ ನೌಕರರು ಹಲವು ಬೇಡಿಕೆಗಳನ್ನು ಈಡೇರಿಸುಂತೆ ಒತ್ತಾಯಿಸಿ ಅನಿರ್ದಿಷ್ಟಾವಧಿ ಮುಷ್ಕರ ಕೈಗೊಂಡಿದ್ದು, ಬೆಟ್ಟದಪುರದ ಅಂಚೆ ಕಚೇರಿ ಎದುರು ಗ್ರಾಮೀಣ ಅಂಚೆ ಕಚೇರಿ ನೌಕರರು ಮಂಗಳವಾರ ಪ್ರತಿಭಟಿಸಿದರು.
ಪ್ರತಿಭಟನೆಯ ನೇತೃತ್ವ ವಹಿಸಿದ್ದ ಸಿ.ಜೆ. ಕುಮಾರ್ ಮಾತನಾಡಿ, ಗ್ರಾಮೀಣ ಅಂಚೆ ನೌಕರರು ಹಲವು ಸಮಸ್ಯೆಗಳನ್ನು ಎದುರಿಸುತ್ತಿದ್ದು, ಅಂಚೆ ಇಲಾಖೆಯಲ್ಲಿ 150 ವರ್ಷಗಳಿಂದ ದಿನಗೂಲಿ ನೌಕರರಾಗಿ ಕಾರ್ಯನಿರ್ವಹಿಸುತ್ತಿದ್ದು, ಇವರಿಗೆ ಯಾವುದೇ ಸೌಲಭ್ಯಗಳನ್ನು ನೀಡದೆ, ಅವೈಜ್ಞಾನಿಕ ವೇತನ ನೀಡುತ್ತಿದೆ.
ಆಳಿನಂತೆ ದುಡಿಯುತ್ತಿರುವ ನಮ್ಮಗಳ ಸಂಸಾರಗಳು ಕಷ್ಟದಿಂದ ಬದುಕುತ್ತಿದ್ದು, ತಮ್ಮನ್ನು ಕಾಯಂಗೊಳಿಸುವಂತೆ ಕೇಂದ್ರ ಸರ್ಕಾರವನ್ನು ಒತ್ತಾಯಿಸಿದರು.
ಬೆಟ್ಟದಪುರ ವ್ಯಾಪ್ತಿಯ ಗ್ರಾಮೀಣ ಅಂಚೆ ನೌಕರರಾದ ಶ್ರೀಕಂಠ, ಗಂಗಾಧರ್, ಸ್ವಾಮಿ, ನರಸಿಂಹಮೂರ್ತಿ, ನಯನ, ಕೃಷ್ಣ, ರವಿ ಭಾಗವಹಿಸಿದ್ದರು.