ಸೆಸ್ಕ್ ಅಧಿಕಾರಿಗಳಿಗೆ ಕಾರ್ಯಾಗಾರ
ಮೈಸೂರು: ಕಡಕೊಳದ ಕೆಇಬಿ ಎಂಜಿನಿಯರ್ಗಳ ಸಂಘದಲ್ಲಿ ಸೆಸ್ಕ್ ಅಧಿಕಾರಿಗಳಿಗೆ ಏರ್ಪಡಿಸಿದ್ದ ನ್ಯಾಯಾಲಯದ ಪ್ರಕರಣಗಳಲ್ಲಿ ನಿರ್ವಹಿಸಬೇಕಾದ ಕರ್ತವ್ಯ ಮತ್ತು ಜವಾಬ್ದಾರಿಗಳ ಕುರಿತ ಕಾರ್ಯಾಗಾರವನ್ನು ಮುಖ್ಯ ಎಂಜಿನಿಯರ್ ಶಾಂತಿ ಉದ್ಘಾಟಿಸಿದರು. ನಿವೃತ್ತ ನ್ಯಾಯಾಧೀಶ ಕೆ.ಎಲ್.ಶಿವಲಿಂಗೇಗೌಡ ತಮ್ಮ 34 ವರ್ಷಗಳ ಸುದೀರ್ಘ ಅನುಭವಗಳನ್ನು ಅಧಿಕಾರಿಗಳೊಂದಿಗೆ ಹಂಚಿಕೊಂಡರು. ಪ್ರಧಾನ ವ್ಯವಸ್ಥಾಪಕ ಸೋಮಶೇಖರ್ ಮಾತನಾಡಿ, ಸಮಾಜಕ್ಕೆ ಉತ್ತಮ ಕೊಡುಗೆ ನೀಡಲು ಅಧಿಕಾರಿಗಳು ನ್ಯಾಯಾಂಗ ವ್ಯವಸ್ಥೆ, ಶಾಸಕಾಂಗ ಮತ್ತು ಕಾರ್ಯಾಗ ವ್ಯವಸ್ಥೆಗಳ ಬಗ್ಗೆ ಮಾಹಿತಿ ಹೊಂದಿರಬೇಕೆಂದು ತಿಳಿಸಿದರು. ಅಧೀಕ್ಷಕ ಎಂಜಿನಿಯರ್ ಸತ್ಯನಾರಾಯಣ, ಪ್ರಭಾರ ನಿಯಂತ್ರಣಾಧಿಕಾರಿ ವೆಂಕಟೇಶ್, ರಘು ಇದ್ದರು. ಬಿಜಿಎಸ್ ಅಪೋಲೋ ಆಸ್ಪತ್ರೆಯ ಹೃದ್ರೋಗ ರ್ತ ಡಾ. ಡೇವಿಡ್ ಪ್ರಾತ್ಯಕ್ಷಿಕೆ ನೀಡಿದರು.