ಸ್ಟ್ಯಾನ್ಲಿ ಪರಶು ಮೇಲಿನ ದೌರ್ಜನ್ಯಕ್ಕೆ ಖಂಡನೆ
ಮೈಸೂರು: ಸಮಾಜದ ಸ್ವಾಸ್ಥ್ಯ ನಿರ್ಮಾಣದಲ್ಲಿ ತೊಡಗಿರುವ ಒಡನಾಡಿ ಸಂಸ್ಥೆಯ ಸ್ಟ್ಯಾನ್ಲಿ ಪರಶು ಅವರ ಮೇಲೆ ನಡೆದ ದೌರ್ಜನ್ಯವನ್ನು ಮೈತ್ರಿ ಸಂಸ್ಥೆಯ ಅಧ್ಯಕ್ಷ ಡಾ. ಮೋಹನ್ ಕೋಟಕೆರೆ, ಸಿಎಸಿಎಲ್-ಕೆ ಸಂಸ್ಥೆ ಸಂಚಾಲಕರಾದ ಈ ಧನಂಜಯ ಹಾಗೂ ಜಿ. ಪ್ರಸನ್ನಮೂರ್ತಿ ಖಂಡಿಸಿದ್ದಾರೆ.
ಸಮಾಜ ಸೇವಾ ಸಂಘಟನೆಗಳು ಹಾಗೂ ಸಮಾಜ ಸೇವಾ ವ್ಯಕ್ತಿಗಳ ಮೇಲೆ ಅನಗತ್ಯ ಹಾಗೂ ಉದ್ದೇಶ ಪೂರ್ವಕವಾಗಿ ತೇಜೋವಧೆ ಮಾಡುವಂತ ಆರೋಪ ಆತಂಕಕಾರಿ ಬೆಳವಣಿಗೆ. ಸಾಮಾಜಿಕ ಪಿಡುಗುಗಳಾದ ವೇಶ್ಯಾವಾಟಿಕೆ, ಮಾನವ ಸಾಗಣಿಕೆ, ಬಾಲ ಕಾರ್ಮಿಕ ಪದ್ಧತಿ ಹಾಗೂ ಮಹಿಳೆಯರ ಮೇಲಿನ ದೌರ್ಜನ್ಯಗಳ ವಿರುದ್ಧ ಕಳೆದ 25 ವರ್ಷಗಳಿಂದ ನಿರಂತರವಾಗಿ ಹೋರಾಟ ನಡೆಸುತ್ತಿರುವ ಸ್ಟ್ಯಾನ್ಲಿ ಮತ್ತು ಪರಶು ಅವರ ಮೇಲೆ ನಡೆಸಿರುವ ದೌರ್ಜನ್ಯ ಸರಿಯಲ್ಲ ಎಂದಿದ್ದಾರೆ.
ಇಂಥ ಘಟನೆಗಳು ಮರುಕಳಿಸದಂತೆ ಸರ್ಕಾರ ನೋಡಿಕೊಳ್ಳಬೇಕು ಎಂದು ಮೈಸೂರು ಜಿಲ್ಲಾ ಸ್ವಯಂ ಸೇವಾ ಸಂಸ್ಥೆಗಳ ಒಕ್ಕೂಟ (ಮೈತ್ರಿ) ಮತ್ತು ಜಿಲ್ಲಾ ಬಾಲ ಕಾರ್ಮಿಕ ಪದ್ಧತಿ ವಿರೋಧಿ ಆಂದೋಲನವು (ಸಿಎಸಿಎಲ್-ಕೆ) ಆಗ್ರಹಿಸಿದೆ.