ಕಾಡಾನೆ ದಾಳಿ; ಬೆಳೆ ಹಾನಿ
ಹುಣಸೂರು: ಕಾಡಾನೆ ದಾಳಿಗೆ ಕಬ್ಬಿನ ಗದ್ದೆ ಸಂಪೂರ್ಣವಾಗಿ ನಾಶವಾಗಿರುವ ಘಟನೆ ತಾಲೂಕಿನ ಉಮ್ಮತ್ತೂರು ಗ್ರಾಪಂ ವ್ಯಾಪ್ತಿಯ ಕಾಳೇನಹಳ್ಳಿಯಲ್ಲಿ ಜರುಗಿದೆ.
ಆನೆಗಳಿದ್ದ ಗುಂಪು ನಾಗರಹೊಳೆ ರಾಷ್ಟ್ರೀಯ ಉದ್ಯಾನದಂಚಿನಿಂದ ಹೊರಬಂದು ಗ್ರಾಮದ ರಾಜಗೋಪಾಲ್ ಎಂಬವರು ಅರ್ಧ ಎಕರೆ ಪ್ರದೇಶದಲ್ಲಿ ಬೆಳೆದಿದ್ದ ಕಬ್ಬಿನ ಫಸಲನ್ನು ಸಂಪೂರ್ಣವಾಗಿ ನಾಶಪಡಿಸಿವೆ. ಅಲ್ಲದೆ ತೋಟದಲ್ಲಿದ್ದ ಪೈಪ್ಗಳು, ವಾಲ್ವ್ಗಳು, ಜೆಟ್ ಪಂಪ್ಗಳನ್ನು ತುಳಿದು ಹಾಳು ಮಾಡಿದೆ. ಸಂಜೆವರೆಗೂ ಅರಣ್ಯ ಇಲಾಖೆಯ ಯಾವೊಬ್ಬ ಅಧಿಕಾರಿಯೂ ಇತ್ತ ಸುಳಿಯಲಿಲ್ಲ.
ಚಿನ್ನಾಭರಣ ಕಳವು
ಹುಣಸೂರು: ಮನೆ ಮುಂಬಾಗಿಲ ಚಿಲಕ ಒಡೆದು 70 ಸಾವಿರಕ್ಕೂ ಹೆಚ್ಚು ಮೌಲ್ಯದ ಚಿನ್ನಾಭರಣ ಕಳವು ಮಾಡಿರುವ ಘಟನೆ ಪಟ್ಟಣದ ಮಂಜುನಾಥ ಬಡಾವಣೆಯಲ್ಲಿ ಜರುಗಿದೆ. ಬಡಾವಣೆ ನಿವಾಸಿ ಶ್ರೀರಾಮ ಫೈನಾನ್ಸ್ ವ್ಯವಸ್ಥಾಪಕ ರಾಘವೇಂದ್ರ ಅವರ ಮನೆಯಲ್ಲಿದ್ದ 9 ಗ್ರಾಂ ಚಿನ್ನ, 850 ಗ್ರಾಂ ಬೆಳ್ಳಿ ಹಾಗೂ 1000 ನಗದನ್ನು ದೋಚಿದ್ದಾರೆ.