'ಗ್ರಾಹಕರೊಂದಿಗಿನ ಬಾಂಧವ್ಯ ಉತ್ತಮವಿದ್ದರೆ ಬ್ಯಾಂಕ್ ಅಭಿವೃದ್ಧಿ'
ಮೈಸೂರು: ಒಂದು ಬ್ಯಾಂಕ್ ಯಶಸ್ಸಿನತ್ತ ಸಾಗಬೇಕಾದರೆ ಅದಕ್ಕೆ ಸಮರ್ಥ ಗ್ರಾಹಕರ ಬಲ ಇರಬೇಕು. ಗ್ರಾಹಕರೊಂದಿಗೆ ಉತ್ತಮ ಬಾಂಧವ್ಯ ಹೊಂದಿರುವ ಬ್ಯಾಂಕ್ಗಳು ಅತಿ ಶೀಘ್ರದಲ್ಲಿ ಅಭಿವೃದ್ಧಿ ಪಥದತ್ತ ಸಾಗುತ್ತದೆ ಎಂದು ಕೆ.ಎಸ್. ನಾಗಪತಿ ಹೇಳಿದರು.
ಜಯಲಕ್ಷ್ಮೀಪುರಂನ ಸ್ಟೇಟ್ ಬ್ಯಾಂಕ್ ಆಫ್ ಮೈಸೂರು ಆವರಣದಲ್ಲಿ ಗ್ರಾಹಕರ ಸಮಾವೇಶದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದ ಅವರು, ನಾಗರಿಕರಿಗೆ ಎಂಥ ಒತ್ತಡದಲ್ಲೂ ನಗುಮೊಗದ ಸೇವೆ ಸಲ್ಲಿಸಿದಾಗ ಗ್ರಾಹಕರು ಹೆಚ್ಚಿನ ಸಂಖ್ಯೆಯಲ್ಲಿ ಬ್ಯಾಂಕ್ನತ್ತ ಆಕರ್ಷಿತರಾಗುತ್ತಾರೆ. ಈ ನಿಟ್ಟಿನಲ್ಲಿ ಸಿಬ್ಬಂದಿ ಶ್ರಮಿಸಬೇಕು ಎಂದರು.
ರಾಷ್ಟ್ರಪತಿಗಳ ಪದಕ ಪಡೆದ ಜಯಲಕ್ಷ್ಮೀಪುರಂ ಠಾಣೆಯ ಎಎಸ್ಸೈ ಎಂ.ಕೆ. ನರಸಿಂಹಾಚಾರ್ ಅವರನ್ನು ಬ್ಯಾಂಕ್ ವತಿಯಿಂದ ಸನ್ಮಾನಿಸಲಾಯಿತು. ವಲಯ ಕಚೇರಿಯ ಸಹಾಯಕ ಪ್ರಧಾನ ಪ್ರಬಂಧಕ ವಿನಾಯಕ ಕೈಸೆರೆ ಗ್ರಾಹಕರ ಕುಂದುಕೊರತೆ ಆಲಿಸಿ ಸೂಕ್ತ ಸಮಾಧಾನ ಹೇಳಿದರು.
ಶಾಖಾ ಪ್ರಬಂಧಕ ಜಿ.ಎ. ನಾಗಭೂಷಣ ಸ್ವಾಗತಿಸಿದರು. ರೂಪಾ ನಾಯಕ್ ಪ್ರಾರ್ಥಿಸಿದರು. ಸಿ.ಎಂ. ನಾಗೇಶ್ ಪ್ರಾಸ್ತಾವಿಕ ಮಾತಿನಲ್ಲಿ ಬ್ಯಾಂಕ್ನಿಂದ ದೊರೆಯಬಹುದಾದ ಸೌಲಭ್ಯಗಳ ಕುರಿತು ವಿವರ ನೀಡಿದರು. ಎಂ.ಜೆ. ಶ್ರೀನಾಥ್ ನಿರೂಪಿಸಿದರು. ಕೆ.ಎಂ. ಸ್ವಪ್ನ ವಂದಿಸಿದರು.