'ನಾಟಕ, ಕಲೆಗೆ ಜನರ ಪ್ರೋತ್ಸಾಹ ಅಗತ್ಯ'
ಮೈಸೂರು: ನಾಟಕ ಮತ್ತು ಕಲೆಯ ಪ್ರೋತ್ಸಾಹಕ್ಕೆ ಸರ್ಕಾರದ ಸಹಕಾರದ ಜೊತೆಗೆ ಜನರ ಪ್ರೋತ್ಸಾಹ ಅಗತ್ಯ ಎಂದು ಸಮಾಜವಾದಿ ಪ. ಮಲ್ಲೇಶ್ ಹೇಳಿದರು.
ಅಪ್ರವರಂಬೆ ಸಂಸ್ಥೆಯು ರಂಗಾಯಣದ ವನರಂಗದಲ್ಲಿ ಡಾ. ವಿಷ್ಣುವರ್ಧನ್ ನೆನಪು ಅಂಗವಾಗಿ ಆಯೋಜಿಸಿರುವ ರಂಗಸಂಭ್ರಮ- ನಾಟಕೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಜನಭರಿತವಾಗದಿದ್ದರೆ ನಾಟಕಗಳು ಮತ್ತು ಕಲೆಗೆ ಉಳಿಗಾಲವಿಲ್ಲ. ಕಲೆಗೆ ಕೇವಲ ಸರ್ಕಾರದ ಪ್ರೋತ್ಸಾಹ ಸಿಕ್ಕರೆ ಸಾಲದು. ಜನರ ಪ್ರೋತ್ಸಾಹವೂ ಬೇಕು. ನಾಟಕಗಳು ಪ್ರೇಕ್ಷಕರ ಮೇಲೆ ನೇರ ಪ್ರಭಾವ ಬೀರುತ್ತದೆ ಎಂದರು.
ಮೈಸೂರು ಸಾಂಸ್ಕೃತಿಕವಾಗಿ ಶ್ರೀಮಂತವಾಗಿದೆ. ಕಲೆಗೆ ಅಪಾರ ಕೊಡುಗೆ ನೀಡಿದೆ. ಸಿನಿಮಾ ಲೋಕದಲ್ಲಿನ ಅನೇಕ ದೊಡ್ಡ ಕಲಾವಿದರು ರಂಗಭೂಮಿಯಿಂದಲೇ ಹೋಗಿದ್ದಾರೆ ಎಂದರು.
ಜಿಲ್ಲಾ ಸಹಕಾರಿ ಯೂನಿಯನ್ ಅಧ್ಯಕ್ಷ ಎಚ್.ವಿ. ರಾಜೀವ್ ಅಧ್ಯಕ್ಷತೆ ವಹಿಸಿದ್ದರು. ನಿವೃತ್ತ ಪ್ರಾಧ್ಯಾಪಕ ಪ್ರೊ. ವೆಂಕೋಬರಾವ್, ಅಪ್ರವರಂಬೆ ಅಧ್ಯಕ್ಷ ನಾಗರಾಜ್, ಉಪಾಧ್ಯಕ್ಷ ರಾಮಪ್ರಸಾದ್ ಇದ್ದರು.
'ನಾಟಕ, ಕಲೆಗೆ ಜನರ ಪ್ರೋತ್ಸಾಹ ಅಗತ್ಯ'
ಮೈಸೂರು: ನಾಟಕ ಮತ್ತು ಕಲೆಯ ಪ್ರೋತ್ಸಾಹಕ್ಕೆ ಸರ್ಕಾರದ ಸಹಕಾರದ ಜೊತೆಗೆ ಜನರ ಪ್ರೋತ್ಸಾಹ ಅಗತ್ಯ ಎಂದು ಸಮಾಜವಾದಿ ಪ. ಮಲ್ಲೇಶ್ ಹೇಳಿದರು.
ಅಪ್ರವರಂಬೆ ಸಂಸ್ಥೆಯು ರಂಗಾಯಣದ ವನರಂಗದಲ್ಲಿ ಡಾ. ವಿಷ್ಣುವರ್ಧನ್ ನೆನಪು ಅಂಗವಾಗಿ ಆಯೋಜಿಸಿರುವ ರಂಗಸಂಭ್ರಮ- ನಾಟಕೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಜನಭರಿತವಾಗದಿದ್ದರೆ ನಾಟಕಗಳು ಮತ್ತು ಕಲೆಗೆ ಉಳಿಗಾಲವಿಲ್ಲ. ಕಲೆಗೆ ಕೇವಲ ಸರ್ಕಾರದ ಪ್ರೋತ್ಸಾಹ ಸಿಕ್ಕರೆ ಸಾಲದು. ಜನರ ಪ್ರೋತ್ಸಾಹವೂ ಬೇಕು. ನಾಟಕಗಳು ಪ್ರೇಕ್ಷಕರ ಮೇಲೆ ನೇರ ಪ್ರಭಾವ ಬೀರುತ್ತದೆ ಎಂದರು.
ಮೈಸೂರು ಸಾಂಸ್ಕೃತಿಕವಾಗಿ ಶ್ರೀಮಂತವಾಗಿದೆ. ಕಲೆಗೆ ಅಪಾರ ಕೊಡುಗೆ ನೀಡಿದೆ. ಸಿನಿಮಾ ಲೋಕದಲ್ಲಿನ ಅನೇಕ ದೊಡ್ಡ ಕಲಾವಿದರು ರಂಗಭೂಮಿಯಿಂದಲೇ ಹೋಗಿದ್ದಾರೆ ಎಂದರು. ಜಿಲ್ಲಾ ಸಹಕಾರಿ ಯೂನಿಯನ್ ಅಧ್ಯಕ್ಷ ಎಚ್.ವಿ. ರಾಜೀವ್ ಅಧ್ಯಕ್ಷತೆ ವಹಿಸಿದ್ದರು. ನಿವೃತ್ತ ಪ್ರಾಧ್ಯಾಪಕ ಪ್ರೊ. ವೆಂಕೋಬರಾವ್, ಅಪ್ರವರಂಬೆ ಅಧ್ಯಕ್ಷ ನಾಗರಾಜ್, ಉಪಾಧ್ಯಕ್ಷ ರಾಮಪ್ರಸಾದ್ ಇದ್ದರು.