ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಮೈಸೂರು

ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ; ಉಪ ಚುನಾವಣೆ ವೇಳಾಪಟ್ಟಿ ಪ್ರಕಟ

Rashmi Kasaragodu
Updated On : 21 Feb 2014, 1:17 am

ಮೈಸೂರು: ನಂಜನಗೂಡು ಮತ್ತು ಪಿರಿಯಾಪಟ್ಟಣ ಎಪಿಎಂಸಿ ಸದಸ್ಯರ ಸ್ಥಾನಗಳಿಗೆ ಮಾ. 16ಕ್ಕೆ ಚುನಾವಣೆ ನಡೆಯಲಿದೆ.
ನಂಜನಗೂಡು ಎಪಿಎಂಸಿಯ ಹುರಾ (ಸಾಮಾನ್ಯ) ಕೃಷಿ ಕ್ಷೇತ್ರ ಸದಸ್ಯ ಸ್ಥಾನವು ಎನ್. ಕೆಂಡಗಣ್ಣಪ್ಪ ಅವರ ರಾಜಿನಾಮೆಯಿಂದ ತೆರವಾಗಿದ್ದ ಸ್ಥಾನಕ್ಕೆ, ಪಿರಿಯಾಪಟ್ಟಣ ಎಪಿಎಂಸಿಯ ಕೊಪ್ಪ (ಪ.ಪಂಗಡ) ಕೃಷಿ ಕ್ಷೇತ್ರ ಸದಸ್ಯ ಸ್ಥಾನವು ನಾಗರಾಜು ಹಾಗೂ ಸಹಕಾರ ಮಾರುಕಟ್ಟೆ ವ್ಯವಹಾರ ಸಂಘದ ಕ್ಷೇತ್ರದ ಸದಸ್ಯ ಸ್ಥಾನವು ಜಗದೀಶ್ ಅವರ ನಿಧನದಿಂದ ತೆರವಾಗಿದ್ದ ಸ್ಥಾನಕ್ಕೆ ಉಪ ಚುನಾವಣೆ ವೇಳಾಪಟ್ಟಿ ಪ್ರಕಟವಾಗಿದೆ.
ಫೆ. 24ರಂದು ಚುನಾವಣಾ ಅಧಿಸೂಚನೆ ಪ್ರಕಟಗೊಳ್ಳಲಿದೆ. ಮಾ.3ಕ್ಕೆ ನಾಮಪತ್ರ ಸಲ್ಲಿಕೆಗೆ ಕಡೆ ದಿನ. ಮಾ. 4ಕ್ಕೆ ನಾಮಪತ್ರ ಪರಿಶೀಲನೆ, ಮಾ.6 ನಾಮಪತ್ರ ಹಿಂಪಡೆಯಲು ಕಡೆ ದಿನ. ಅವಶ್ಯವಿದ್ದರೆ ಮತದಾನವು ಮಾ.16ರ ಬೆಳಗ್ಗೆ 8ರಿಂದ ಸಂಜೆ 5ರವರೆಗೆ ನಡೆಯಲಿದೆ. ಮತ ಎಣಿಕೆಯು ಮಾ. 18ರಂದು ನಡೆಯಲಿದೆ ಎಂದು ಜಿಲ್ಲಾಧಿಕಾರಿ ಸಿ.ಶಿಖಾ ತಿಳಿಸಿದ್ದಾರೆ.
ನಂಜನಗೂಡು ಎಪಿಎಂಸಿಯ ಉಪ ಚುನಾವಣೆಗೆ ನಂಜನಗೂಡು ತಹಸೀಲ್ದಾರ್ ಅವರನ್ನು ಚುನಾವಣಾಧಿಕಾರಿ ಹಾಗೂ ನಂಜನಗೂಡು ಎಪಿಎಂಸಿಯ ಸಹ ಕಾರ್ಯದರ್ಶಿ ಅವರನ್ನು ಸಹಾಯಕ ಚುನಾವಣಾಧಿಕಾರಿಯಾಗಿ ನೇಮಿಸಲಾಗಿದೆ. ಪಿರಿಯಾಪಟ್ಟಣ ಎಪಿಎಂಸಿ ಉಪ ಚುನಾವಣೆಗೆ ಅಲ್ಲಿನ ಕೃಷಿ ಇಲಾಖೆ ಸಹಾಯಕ ನಿರ್ದೇಶಕರನ್ನು ಚುನಾವಣಾಧಿಕಾರಿ ಹಾಗೂ ಪಿರಿಯಾಪಟ್ಟಣ ಎಪಿಎಂಸಿ ಕಾರ್ಯದರ್ಶಿಯನ್ನು ಸಹಾಯಕ ಚುನಾವಣಾಧಿಕಾರಿಯಾಗಿ ನೇಮಿಸಿದೆ.
ನಾಮಪತ್ರಗಳನ್ನು ಆಯಾ ತಾಲೂಕು ಕಚೇರಿಯಲ್ಲಿ ಸ್ವೀಕರಿಸಲಾಗುವುದು. ಮತದಾರರ ಪಟ್ಟಿಯು ಆಯಾ ತಾಲೂಕು ತಹಸೀಲ್ದಾರ್ ಕಚೇರಿಯಲ್ಲಿ ಲಭ್ಯವಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement