ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಮೈಸೂರು

ಟೆಂಪೋ ಉರುಳಿ 40 ಮಂದಿಗೆ ಗಾಯ

Rashmi Kasaragodu
Updated On : 21 Feb 2014, 1:17 am

ಕೆ.ಆರ್. ನಗರ: ಮದುವೆಗೆ ಜನರನ್ನು ಕರೆದೊಯ್ಯುತ್ತಿದ್ದ ಟೆಂಪೋವೊಂದು ಚಾಲಕನ ನಿಯಂತ್ರಣ ತಪ್ಪಿ ಮಗುಚಿ ಬಿದ್ದ ಪರಿಣಾಮ 40 ಮಂದಿ ಗಾಯಗೊಂಡಿರುವ ಘಟನೆ ತಾಲೂಕಿನ ಮಾರಗೌಡನಹಳ್ಳಿಯಲ್ಲಿ ಜರುಗಿದೆ.
ಟೆಂಪೋ ಮಾರಗೌಡನಹಳ್ಳಿಯಿಂದ ಕೆ.ಆರ್. ನಗರಕ್ಕೆ ತೆರಳುತ್ತಿತ್ತು. ಗಾಯಾಳುಗಳಿಗೆ ಕೆ.ಆರ್. ನಗರದ ಸಾರ್ವಜನಿಕ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ನೀಡಲಾಯಿತು. ಗಂಭೀರವಾಗಿ ಗಾಯಗೊಂಡ 6 ಮಂದಿ ಸೇರಿದಂತೆ ಒಟ್ಟು 36 ಗಾಯಾಳುಗಳನ್ನು ಹೆಚ್ಚಿನ ಚಿಕಿತ್ಸೆಗಾಗಿ ಮೈಸೂರಿನ ಕೆ.ಆರ್. ಆಸ್ಪತ್ರೆಗೆ ಕಳುಹಿಸಲಾಯಿತು.
ಗಾಯಾಳುಗಳಿಗೆ ಆಸ್ಪತ್ರೆಯ ವೈದ್ಯಾಧಿಕಾರಿ ಡಾ. ಎಚ್.ರಾಮಚಂದ್ರ ನೇತೃತ್ವದಲ್ಲಿ ಡಾ. ಚೇತನ್ಕುಮಾರ್, ಡಾ. ಗೌತಮ್, ಡಾ. ಅಶೋಕ್, ಡಾ. ಶಿವಶಂಕರ್, ಡಾ. ಶಾಂತಕುಮಾರ್ ಮತ್ತು ಸಿಬ್ಬಂದಿ ಚಿಕಿತ್ಸೆ ನೀಡಿ,  ಮೈಸೂರಿನ ಆಸ್ಪತ್ರೆಗೆ ಕಳುಹಿಸಲು ಕ್ರಮ ಕೈಗೊಂಡರು.
ಸ್ಥಳಕ್ಕೆ ಕೆ.ಆರ್. ನಗರದ ಎಸ್ಐ ಎಂ. ಷಣ್ಮುಗಂ ಭೇಟಿ ನೀಡಿದ್ದರು.  

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement