ಸಾಂಸ್ಕೃತಿಕೋತ್ಸವ
ಬನ್ನೂರು: ಪಟ್ಟಣದ ವಿವೇಕಾನಂದ ಶಿಕ್ಷಣ ಸಂಸ್ಥೆಯಲ್ಲಿ ಫೆ. 21ರಿಂದ 23ರವರೆಗೆ ಸಾಂಸ್ಕೃತಿಕೋತ್ಸವ ನಡೆಯಲಿದೆ. ಫೆ. 21ರ ಸಂಜೆ 6.30ಕ್ಕೆ ಶಾಸಕ ಎ.ಬಿ. ರಮೇಶ್ ಬಂಡಿಸಿದ್ದೇಗೌಡ ಉದ್ಘಾಟಿಸುವರು. ಲೋಕೋಪಯೋಗಿ ಸಚಿವ ಡಾ.ಮಹದೇವಪ್ಪ ಅಧ್ಯಕ್ಷತೆ ವಹಿಸುವರು. ತಾಪಂ ಮಾಜಿ ಅಧ್ಯಕ್ಷ ಸುಧೀರ್, ರವೀಂದ್ರ ಕುಮಾರ್, ಸತೀಶ್ನಾಯಕ್ ಭಾಗವಹಿಸುವರು. ಫೆ. 22ರ ಸಂಜೆ 6.30ಕ್ಕೆ ಎಸ್ಸೆಸ್ಸೆಲ್ಸಿ ಹಾಗೂ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳ ಬೀಳ್ಕೊಡುಗೆ ಸಮಾರಂಭ ನಡೆಯಲಿದೆ. ಫೆ. 23ರ ಸಂಜೆ 6.30ಕ್ಕೆ ಪ್ರೌಢಶಾಲಾ ವಿದ್ಯಾರ್ಥಿಗಳ ಸಾಂಸ್ಕೃತಿಕೋತ್ಸವ ನಡೆಯಲಿದೆ.