ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಮೈಸೂರು

ಹಂತಕರ ಬಿಡುಗಡೆ ಸಲ್ಲ: ಜಮೀಲ್ ಆಗ್ರಹ

Rashmi Kasaragodu
Updated On : 21 Feb 2014, 1:15 am

ಮೈಸೂರು: ಮಾಜಿ ಪ್ರಧಾನಿ ರಾಜೀವ್ ಗಾಂಧಿ ಹಂತಕರಿರಲಿ ಅಥವಾ ಕುಖ್ಯಾತ ಕಾಡುಗಳ್ಳ, ನರಹಂತಕ ವೀರಪ್ಪನ್ ಸಹಚರರಿರಲಿ ಅವರನ್ನು ಯಾವುದೇ ಕಾರಣಕ್ಕೂ ಜೈಲಿನಿಂದ ಬಿಡುಗಡೆ ಮಾಡಬಾರದು ಎಂದು ಎಂ. ಜಮೀಲ್ ಅಹ್ಮದ್ ಆಗ್ರಹಿಸಿದ್ದಾರೆ.
ಜಮೀಲ್ ಅಹ್ಮದ್ ಅವರು ವೀರಪ್ಪನ್ನಿಂದ 1992ರ ಆ.14ರಂದು ಕೊಳ್ಳೇಗಾಲ ತಾ. ಮೀಣ್ಯಂ ಬಳಿ ಹತರಾದ ಸಬ್ ಇನ್ಸ್ಪೆಕ್ಟರ್ ಶಕೀಲ್ ಅಹ್ಮದ್ ಅವರ ಸಹೋದರ.
ಪೊಲೀಸರು, ನಾಗರಿಕರು ಸೇರಿದಂತೆ 22 ಮಂದಿಯನ್ನು ಬಲಿ ತೆಗೆದುಕೊಂಡು ಪಾಲಾರ್ ಬಾಂಬ್ ಸ್ಫೋಟ ಪ್ರಕರಣದಲ್ಲಿ ಗಲ್ಲು ಶಿಕ್ಷೆಗೆ ಗುರಿಯಾಗಿ ನಂತರ ಸುಪ್ರೀಂ ಕೋರ್ಟ್ನಿಂದ ಜೀವದಾನ ಪಡೆದಿರುವ ವೀರಪ್ಪನ್ನ ನಾಲ್ವರು ಸಹಚರರನ್ನು ಬಿಡುಗಡೆ ಮಾಡಬಾರದು. ಅದೇ ರೀತಿ ರಾಜೀವ್ಗಾಂಧಿ ಕೊಲೆಗೈದವರನ್ನೂ ಬಿಡುಗಡೆ ಮಾಡಬಾರದು. ಅವರೆಲ್ಲ ಜೀವವಿರುವ ತನಕ ಜೈಲಿನಲ್ಲಿಯೇ ಕೊಳೆಯಬೇಕು ಎಂದಿದ್ದಾರೆ.
ತಮಿಳುನಾಡು ಮುಖ್ಯಮಂತ್ರಿ ಜೆ. ಜಯಲಲಿತಾ ಅವರು ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಮತ ಬ್ಯಾಂಕ್ ಕಾರಣದಿಂದ ರಾಜೀವ್ ಗಾಂಧಿ ಹಂತಕರ ಬಿಡುಗಡೆಗೆ ಮುಂದಾಗಿದ್ದಾರೆ ಎಂದು ಅವರು ಟೀಕಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement