ಅಪರಿಚಿತ ವ್ಯಕ್ತಿ ಸಾವು
ಮೈಸೂರು: ಮಂಡಿ ಠಾಣೆ ವ್ಯಾಪ್ತಿಯ ರಂಗ ಪಾಪಣ್ಣ ವೃತ್ತದ ಬಳಿ ಅಸ್ವಸ್ಥಗೊಂಡಿದ್ದ ಅಪರಿಚಿತ ವ್ಯಕ್ತಿಯು ಕೆ.ಆರ್. ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ.
ಚಹರೆ- 50 ವರ್ಷ, 5.6 ಅಡಿ ಎತ್ತರ, ಸಾಧಾರಣ ಶರೀರ, ಬಲಗೈಯಲ್ಲಿ ಕೆಂಪು ದಾರ ಕಟ್ಟಿದ್ದಾರೆ. ಕುರುಚಲು ಬಿಳಿ ಗಡ್ಡ, ಬಿಳಿ ಮತ್ತು ಕಪ್ಪು ಕೂದಲು ಇದೆ. ಬಿಳಿ ನೀಲಿ ಗೆರೆಯುಳ್ಳ ಶರ್ಟ್ ಧರಿಸಿದ್ದಾರೆ. ವಾರಸುದಾರರು ಇದ್ದಲ್ಲಿ ದೂ. 0821- 2418313, 513 ಸಂಪರ್ಕಿಸಲು ಮಂಡಿ ಠಾಣೆಯ ಎಸ್ಐ ಶಬ್ಬೀರ್ಹುಸೇನ್ ಕೋರಿದ್ದಾರೆ.