ಕನ್ನಡ ಭವನ ಶೀಘ್ರ ನಿರ್ಮಿಸಲು ಆಗ್ರಹ
ಮೈಸೂರು: ಕನ್ನಡ ಭವನ ನಿರ್ಮಾಣ ವಿಚಾರದಲ್ಲಿ ನಗರಪಾಲಿಕೆಯು ವಿಳಂಬ ನೀತಿ ಅನುಸರಿಸುತ್ತಿರುವುದನ್ನು ಖಂಡಿಸಿ ಮೈಸೂರು ಕನ್ನಡ ವೇದಿಕೆಯವರು ಪಾಲಿಕೆ ಕಚೇರಿ ಎದುರು ಶುಕ್ರವಾರ ಪ್ರತಿಭಟಿಸಿದರು.
ಪಾಲಿಕೆಯ ಕಳೆದ ಬಜೆಟ್ನಲ್ಲಿ ಕನ್ನಡ ಭವನ ನಿರ್ಮಿಸುವ ಪ್ರಸ್ತಾಪವಿತ್ತು. ಆದರೆ, ಈವರೆಗೂ ಭವನ ನಿರ್ಮಾಣ ಕಾರ್ಯ ಆರಂಭಿಸಿಲ್ಲ. ಇನ್ನಾದರೂ ಕನ್ನಡ ಭವನ ನಿರ್ಮಾಣ ಮಾಡುವ ಮೂಲಕ ಮೇಯರ್ ಮತ್ತು ಪಾಲಿಕೆ ಸದಸ್ಯರು ಕನ್ನಡ ಅಭಿಮಾನ ತೋರಬೇಕು.
ಈ ಬಾರಿಯ ಬಜೆಟ್ನಲ್ಲಿ ಕನ್ನಡ ಭವನ ನಿರ್ಮಾಣಕ್ಕೆ ಸಂಬಂಧಿಸಿದಂತೆ ಸೂಕ್ತ ನಿರ್ಧಾರ ಕೈಗೊಳ್ಳಬೇಕು. ಇಲ್ಲದಿದ್ದರೆ ಹೋರಾಟ ತೀವ್ರಗೊಳಿಸಬೇಕಾಗುತ್ತದೆ ಎಂದು ಎಚ್ಚರಿಸಿದರು.
ವೇದಿಕೆಯ ಅಧ್ಯಕ್ಷ ಎಸ್. ಬಾಲಕೃಷ್ಣ, ಮುಖಂಡರಾದ ನಾಲಾಬೀದಿ ರವಿ, ಸುರೇಶ್ಬಾಬು, ಗುರು, ಅರವಿಂದ, ಪ್ರಕಾಶ್, ಗೋಪಿ, ಚಿಣ್ಣಪ್ಪ, ಗಿರೀಶ್, ಅಜಯ್ಕುಮಾರ್ ಜೈನ್, ಶಂಕರ್, ವೆಂಕಟೇಶ್, ಕುಮಾರ, ಮಂಜು, ಮಹದೇವಸ್ವಾಮಿ, ಮಂಜುನಾಥ, ಬೋಗಾದಿ ಸಿದ್ದೇಗೌಡ, ಬೀರಪ್ಪ, ರಮೇಶ್ಬಾಬು, ಮನುರಾಜ್, ಚಂದ್ರ, ಸುನಿಲ್ಕುಮಾರ್ ಇದ್ದರು.