ನಾಳೆ ಭರತಮುನಿ ಜಯಂತಿ
ಮೈಸೂರು: ಭಾರತೀಯ ನೃತ್ಯಕಲಾ ಪರಿಷತ್ ಮತ್ತು ಸಂಸ್ಕಾರ ಭಾರತಿ ಸಂಯುಕ್ತಾಶ್ರಯದಲ್ಲಿ ಫೆ. 23ರ ಸಂಜೆ 5.15ಕ್ಕೆ ಜಗನ್ಮೋಹನ ಅರಮನೆಯಲ್ಲಿ ಭರತಮುನಿ ಜಯಂತಿ ಉತ್ಸವದ ಅಂಗವಾಗಿ ನರ್ತನ ನಮನ ಕಾರ್ಯಕ್ರಮ ನಡೆಯಲಿದೆ. ರಂಗಕರ್ಮಿ ಡಾ.ಎಚ್.ಕೆ. ರಾಮನಾಥ್ ಅಧ್ಯಕ್ಷತೆ ವಹಿಸುವರು. ನೃತ್ಯಗಂಗಾ ನಿರ್ದೇಶಕಿ ರೂಪಶ್ರೀ ಮಧುಸೂದನ್ ನುಡಿನಮನ ಸಲ್ಲಿಸುವರು. ಸಂಜೆ 6.15 ರಿಂದ 8.45ರವರೆಗೆ ನೃತ್ಯಾರ್ಪಣಾ ನಡೆಯಲಿದೆ.
ಜ್ಯೋತಿಷ್ಯ ಉಚಿತ ಉಪನ್ಯಾಸ
ಮೈಸೂರು ಜೋತಿಷ್ಯ ಸಂಶೋಧನಾ ಸೊಸೈಟಿಯು ಫೆ.23ರಂದು ಜ್ಯೋತಿಷ್ಯ ಉಚಿತ ಉಪನ್ಯಾಸ ಕಾರ್ಯಕ್ರಮ ಏರ್ಪಡಿಸಿದೆ. ಮಧ್ಯಾಹ್ನ 3ಕ್ಕೆ ಜೆಎಲ್ಬಿ ರಸ್ತೆಯಲ್ಲಿರುವ ರೋಟರಿ ಸಭಾಂಗಣದಲ್ಲಿ ಕಾರ್ಯಕ್ರಮ ನಡೆಯಲಿದ್ದು, ಆಸಕ್ತರು ಮಾಹಿತಿಗೆ ಮೊ. 9945849555 ಸಂಪರ್ಕಿಸಬಹುದು.
ಅಕ್ಯುಪಂಕ್ಚರ್ ಉಚಿತ ತರಬೇತಿ
ಶಾರದಾದೇವಿನಗರದ ಮಹರ್ಷಿ ಧ್ಯಾನ ಮತ್ತು ವ್ಯಕ್ತಿತ್ವ ವಿಕಾಸ ಕೇಂದ್ರದಲ್ಲಿ ಅಕ್ಯುಪಂಕ್ಚರ್ ಹಾಗೂ ಉಚಿತ ತರಬೇತಿ ಶಿಬಿರವನ್ನು ಫೆ. 23ರಂದು ಬೆಂಗಳೂರಿನ ಡಾ. ಬಸವರಾಜ್ ನಡೆಸಿಕೊಡುವರು. ಬೆಳಗ್ಗೆ 10ರಿಂದ ಮಧ್ಯಾಹ್ನ 3ರವರೆಗೆ ಏರ್ಪಡಿಸಿದೆ. ಆಸಕ್ತರು ಮೊ. 9972830013 ಸಂಪರ್ಕಿಸುವಂತೆ ಟ್ರಸ್ಟಿ ಕೆ.ಆರ್. ಜಗನ್ನಾಥಯ್ಯಶೆಟ್ಟಿ ತಿಳಿಸಿದ್ದಾರೆ.
ಚಾಮುಂಡೇಶ್ವರಿ ಪಲ್ಲಕ್ಕಿ ಉತ್ಸವ
ಹೆಬ್ಬಾಳಿನ ಸೂರ್ಯಬೇಕರಿ ಬಳಿ ಇರುವ ಶ್ರೀಚಾಮುಂಡೇಶ್ವರಿ ದೇವಸ್ಥಾನದ 23ನೇ ವಾರ್ಷಿಕೋತ್ಸವದ ಅಂಗವಾಗಿ ಫೆ. 23ರಂದು ಅಮ್ಮನವರ ಪಲ್ಲಕ್ಕಿ ಉತ್ಸವ ಏರ್ಪಡಿಸಿದೆ. ಬೆಳಗ್ಗೆ 7.30ರಿಂದ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿದ್ದು, 11.30ಕ್ಕೆ ಪಲ್ಲಕಿ ಉತ್ಸವ ನಡೆಯಲಿದೆ. ಮಧ್ಯಾಹ್ನ 12ಕ್ಕೆ ಅನ್ನ ಸಂತರ್ಪಣೆ ಏರ್ಪಡಿಸಿದೆ.
ಉಪಾಹಾರ, ಹಣ್ಣು ವಿತರಣೆ
ಜನರಿಂದ ಜನರಿಗಾಗಿ ಸೇವಾ ಸಂಸ್ಥೆಯು ಬನ್ನಿಮಂಟಪ ಶಿವರಾತ್ರೀಶ್ವರ ನಗರದಲ್ಲಿರುವ ಮದರ್ ತೆರೇಸಾ ಮಹಿಳಾ ವಸತಿ ನಿಲಯದ ಸದಸ್ಯರಿಗೆ ಫೆ. 23ರಂದು ಉಪಹಾರ ಮತ್ತು ಹಣ್ಣು ವಿತರಿಸಲಿದೆ ಎಂದು ಎನ್. ವಿಠಲ್ ತಿಳಿಸಿದ್ದಾರೆ.
ನಾಳೆ ವಧು ವರರ ಸಮಾವೇಶ
ಜೆ.ಪಿ. ನಗರದ 18ನೇ ತಿರುವಿನಲ್ಲಿರುವ ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾದಲ್ಲಿ ಫೆ. 23ರ ಬೆಳಗ್ಗೆ 10ಕ್ಕೆ ತ್ರಿಮತಸ್ಥ ಬ್ರಾಹ್ಮಣರ ಮಕ್ಕಳ ವಧು- ವರರ ಅನ್ವೇಷಣೆ, ಸಮಾವೇಶ ಹಾಗೂ ನೋಂದಣಿ ಕಾರ್ಯಕ್ರಮ ಏರ್ಪಡಿಸಿದ್ದು, ಮೊ. 98453 39221 ಸಂಪರ್ಕಿಸಬಹುದು.
ವಿದ್ಯಾರ್ಥಿಗಳ ಸಭೆ
ಜೆಎಸ್ಎಸ್ ಅಂಗವಿಕಲ ಪಾಲಿಟೆಕ್ನಿಕ್ನ ಹಿರಿಯ ವಿದ್ಯಾರ್ಥಿಗಳ ಸಭೆಯು ಫೆ. 23ರ ಬೆಳಗ್ಗೆ 10.30ಕ್ಕೆ ಪಾಲಿಟೆಕ್ನಿಕ್ನ ಸೆಮಿನಾರ್ ಹಾಲ್ನಲ್ಲಿ ನಡೆಯಲಿದ್ದು, ಮೊ. 96866 77230 ಸಂಪರ್ಕಿಸಬಹುದು.
ಸಂವಾದ
ಕುವೆಂಪುನಗರದಲ್ಲಿರುವ ಸುರುಚಿ ರಂಗಮನೆಯಲ್ಲಿ ಫೆ. 23ರ ಬೆಳಗ್ಗೆ 10.30ಕ್ಕೆ ಸಾಹಿತ್ಯ ಚಾವಡಿ- ಸಂವಾದ ಕಾರ್ಯಕ್ರಮ ಏರ್ಪಡಿಸಿದ್ದು, ವಿದ್ವಾನ್ ನಾರಾಯಣ ದೇಸಾಯಿ ಅವರು ಸಂಸ್ಕೃತ ಮತ್ತು ಭಾರತೀಯರ ಬದುಕು ವಿಷಯದ ಬಗ್ಗೆ ಮಾತನಾಡುವರು.
ದತ್ತು ಸ್ವೀಕಾರ
ಶ್ರೀ ಚಾಮರಾಜೇಂದ್ರ ಮೃಗಾಲಯದ ಪ್ರಾಣಿಗಳ ದತ್ತು ಸ್ವೀಕಾರ ಯೋಜನೆಯಡಿ ಮಂಡ್ಯದ ಮಹಾಲಕ್ಷ್ಮಮ್ಮ ಅವರು ಬೂದೂ ಗಿಳಿ ಹಾಗೂ ಬಿಳಿ ನವಿಲುನ್ನು ಒಂದು ವರ್ಷದ ಅವಧಿಗೆ ದತ್ತು ಸ್ವೀಕರಿಸಿದ್ದಾರೆ.