ರೈತರಿಗೆ ಉಪಯುಕ್ತ ಸಲಹೆ
ಮೈಸೂರು: ಜಿಲ್ಲೆಯಲ್ಲಿ ಫೆ. 22ರಿಂದ 25ರವರೆಗೆ ಮೋಡ ಕವಿದ ವಾತಾವರಣವಿದ್ದು, ಚದುರಿದಂತೆ ಅಲ್ಲಲ್ಲಿ ತುಂತುರು ಮಳೆ ಬರುವ ಸಾಧ್ಯತೆ ಇದೆ ಎಂದು ನಾಗನಹಳ್ಳಿ ಸಾವಯವ ಕೃಷಿ ಸಂಶೋಧನಾ ಕೇಂದ್ರದ ಕ್ಷೇತ್ರಾಧೀಕ್ಷಕ ಡಾ.ಸಿ. ಗೋವಿಂದರಾಜು, ಸಹ ಸಂಶೋಧಕ ಎನ್. ನರೇಂದ್ರಬಾಬು ತಿಳಿಸಿದ್ದಾರೆ. ಕೃಷಿ ಚಟುವಟಿಕೆಯಲ್ಲಿ ತೊಡಗಿರುವ ರೈತರಿಗೆ ಸಲಹೆ ನೀಡಿದ್ದು, ಮೆಣಸಿನಕಾಯಿ ಹೂ ಬಿಡುವ ಸಂದರ್ಭದಲ್ಲಿ ಎಲೆ ಮುದುಡು ರೋಗ ತಗುಲಿದ್ದರೆ ಅದರ ಹತೋಟಿಗೆ 0.6 ಮಿ.ಲೀ. ಇಮಿಡೋಕ್ಸೋಪ್ರಿಡ್ ಔಷಧಿಯನ್ನು ಪ್ರತಿ ಲೀಟರ್ ನೀರಿನಲ್ಲಿ ಮಿಶ್ರಣ ಮಾಡಿ ಸಿಂಪಡಿಸುವುದು. ಟೊಮೆಟೋ, ಮೆಣಸಿನಕಾಯಿ, ದೊಡ್ಡಮೆಣಸಿನಕಾಯಿಗೆ ಸೊರಗು ರೋಗ ತಗುಲಿದ್ದರೆ 500 ಮಿ. ಗ್ರಾಂ ಸ್ಟ್ರೆಪ್ಟೊಮೈಸಿನ್ ಸಲ್ಫೆಟ್ ಔಷಧಿಯನ್ನು 1 ಲೀ. ನೀರಿನಲ್ಲಿ ಬೆರೆಸಿ ಸಿಂಪಡಿಸಬೇಕು. ದೂ. 0821- 2591267.