ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಮೈಸೂರು

ಕೊರಟಗೆರೆ- ಬಾವಲಿ ರಸ್ತೆ ಮರು ಡಾಂಬರೀಕರಣ

Mainashree
Updated On : 23 Feb 2014, 11:11 am

ಎಚ್.ಡಿ. ಕೋಟೆ: ತಾಲೂಕಿನ ಕೊರಟಗೆರೆ- ಬಾವಲಿ ರಸ್ತೆಯ ಮರು ಡಾಂಬರೀಕರಣ ಕಾಮಗಾರಿಗೆ ಶಾಸಕ ಎಸ್. ಚಿಕ್ಕಮಾದು ಭಾನುವಾರ ಗುದ್ದಲಿ ಪೂಜೆ ನೆರವೇರಿಸಿದರು.
ನಂತರ ಮಾತನಾಡಿದ ಅವರು, ರಾಜ್ಯ ಹೆದ್ದಾರಿಯಾಗಿರುವ ಸದರಿ ರಸ್ತೆ ಗುಂಡಿ ಬಿದ್ದು ಹಾಳಾಗಿದೆ. ರಸ್ತೆಯಿಂದ ಎರಡೂ ರಾಜ್ಯದ ಸಂಪರ್ಕವು ಅಬಿವೃದ್ಧಿಯಾಗುತ್ತಿದ್ದು ಹೆಚ್ಚಿನ ವಾಹನ ಸಂಚಾರವು ಅಧಿಕವಾಗಿದೆ. ಆದ್ದರಿಂದ ಗುಣಮಟ್ಟದ ರಸ್ತೆಯಾಗಬೇಕಾಗಿದೆ. ಅದೇ ರೀತಿಯಲ್ಲಿ ಈ ದಿನ ತಾಲೂಕು ಬಿ. ಮಟಕೆರೆ ರಸ್ತೆಯೂ ಸಂಪೂರ್ಣವಾಗಿ ಹದಗೆಟ್ಟಿದ್ದು ಈ ರಸ್ತೆಗೆ 92 ಲಕ್ಷ ಮಂಜೂರಾಗಿದೆ ಎಂದರು.
ಕಸಬಾ ಹೋಬಳಿ ಶಾಂತಿಪುರದಿಂದ ಸರಗೂರು ರಸ್ತೆಯ ಕಾಮಗಾರಿಯು ಆರಂಭವಾಗಿ 1 ವರ್ಷ ಕಳೆದಿದ್ದರೂ ಸಹ ಕೆಲಸ ವಿಳಂಬವಾಗಿ ಸಾಗುತ್ತಿದೆ. ಮಾ.1ರಂದು ತಾಲೂಕಿನ ವಿವಿಧ ಅಭಿವೃದ್ಧಿ ಕಾಮಗಾರಿ ಹಾಗೂ ಉದ್ಘಾಟನೆಗೆ ಮುಖ್ಯಮಂತ್ರಿಗಳು ಆಗಮಿಸಲಿದ್ದು, ಅಂದು ಕೆ. ಬೆಳತೂರು ಆಸ್ಪತ್ರೆ, ಮುರಾರ್ಜಿ ದೇಸಾಯಿ ವಸತಿ ಶಾಲೆ ಉದ್ಘಾಟನೆ, ಕಿತ್ತೂರು ರಾಣಿ ಚೆನ್ನಮ್ಮ ಶಾಲೆಗೆ ಗುದ್ದಲಿ ಪೂಜೆ, ತಾಲೂಕಿನ ಸುಮಾರು 100 ಹಳ್ಳಿಗಳಿಗೆ ಶಾಶ್ವತ ಕುಡಿಯುವ ನೀರು ಯೋಜನೆಗಳಿಗೆ ಚಾಲನೆ ನೀಡುವರು. ಒಟ್ಟಾರೆ 88 ಕೋಟಿ ಬಿಡುಗಡೆಯಾಗಿದೆ ಎಂದು ಮಾಹಿತಿ ನೀಡಿದರು.
ಸರಗೂರು ಬ್ಲಾಕ್ ಜೆಡಿಎಸ್ ಅಧ್ಯಕ್ಷ ರವಿ, ಮಾಜಿ ಪ್ರದಾನ ಎಂ.ಸಿ. ದೊಡ್ಡನಾಯಕ, ಮಾದಾಪುರ ಗ್ರಾಪಂ ಅಧ್ಯಕ್ಷೆ ನಿರ್ಮಲ, ಅಶೋಕ್, ಸಿದ್ದಪ್ಪ, ಶಿವರಾಂ, ಮಹದೇವಯ್ಯ, ಲೋಕೋಪಯೋಗಿ ಎಇಇ ಪ್ರಬಾರ ರಾಜು ಹಾಗೂ ಗ್ರಾಮದ ಮುಖಂಡರು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement