ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಮೈಸೂರು

ಡಾ. ಕೆ. ಮಹದೇವ್ ವಿರುದ್ಧ ಮಾನನಷ್ಟ ಮೊಕದ್ದಮೆ: ಅಪ್ಪಾಜಿ ಗೌಡ

Mainashree
Updated On : 23 Feb 2014, 11:18 am

ಮೈಸೂರು: ವಿನಾಕಾರಣ ನನ್ನ ತೇಜೋವಧೆಗೆ ಮುಂದಾಗಿರುವ ರಾಜ್ಯ ಒಕ್ಕಲಿಗರ ಸಂಘದ ಮಾಜಿ ಕಾರ್ಯದರ್ಶಿ ಡಾ. ಕೆ. ಮಹದೇವ್ ಅವರ ವಿರುದ್ಧ ಮಾನನಷ್ಟ ಮೊಕದ್ದಮೆ ದಾಖಲಿಸಲಾಗುವುದು ಎಂದು ರಾಜ್ಯ ಒಕ್ಕಲಿಗರ ಸಂಘದ ಅಧ್ಯಕ್ಷ ಅಪ್ಪಾಜಿ ಗೌಡ ಹೇಳಿದರು.    
ಇತ್ತೀಚೆಗೆ ನಡೆದ ಒಕ್ಕಲಿಗರ ಸಂಘದ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿ ನನ್ನ ವಿರುದ್ಧ ಸೋತ ನಂತರ ಮಾನಸಿಕ ಸಮತೋಲನ ಕಳೆದುಕೊಂಡಿರುವ ಡಾ. ಕೆ. ಮಹದೇವ್ ಅವರು ಇತ್ತೀಚೆಗೆ ಸುದ್ದಿಗೋಷ್ಠಿ ನಡೆಸಿ ನನ್ನ ತೇಜೋವಧೆಗೆ ಮುಂದಾಗಿದ್ದಾರೆ. ಅಲ್ಲದೆ ಸತ್ಯಕ್ಕೆ ದೂರುವಾದ ಹೇಳಿಕೆಗಳನ್ನು ನೀಡಿ ಜನರನ್ನು ತಪ್ಪು ದಾರಿಗೆ ಎಳೆಯುತ್ತಿದ್ದಾರೆ ಎಂದು ಭಾನುವಾರ ಅವರು ಸುದ್ದಿಗೋಷ್ಠಿಯಲ್ಲಿ ಟೀಕಿಸಿದರು.
2007-08ರಲ್ಲಿ 42 ಸೀಟುಗಳನ್ನು ಡಾ. ಕೆ. ಮಹದೇವ್ ಅವರೇ ಡ್ರಾಪ್‌ಔಟ್ ಮಾಡಿಸಿದರು. ಅಂದಿನ ಆಡಳಿತರೂಢ ಸದಸ್ಯರು ಹಾಗೂ ಕಾಲೇಜು ಮಂಡಳಿಯ ಅಧ್ಯಕ್ಷರೊಡಗೂಡಿ 42 ಸೀಟುಗಳನ್ನು ಖಾಲಿ ಮಾಡಿಸಿದ್ದಾರೆ. 2014ರಲ್ಲಿ ಈಗ ಈ ವಿಷಯವನ್ನು ತಿರುಚಿಹಾಕಿ ಸಾಮಾನ್ಯ ಜನತೆಗೆ ತಪ್ಪು ಮಾಹಿತಿ ಕೊಡುವ ಉದ್ದೇಶದಿಂದ ಸುಳ್ಳು ಆರೋಪ ಹೊರಿಸುತ್ತಿದ್ದಾರೆ. ನಾನು ಮೊದಲಿನಿಂದಲೂ ಡ್ರಾಪ್‌ಔಟ್ ಸೀಟುಗಳ ವಿರೋಧಿಯಾಗಿದ್ದು, ಅಂತಹ ಯಾವುದೇ ಕೃತ್ಯದಲ್ಲೂ ಭಾಗಿಯಾಗಿಲ್ಲ ಎಂದು ಅವರು ಸ್ಪಷ್ಟನೆ ನೀಡಿದರು.
ಸಂಘದ ಕಾರ್ಯದರ್ಶಿಯಾಗಿದ್ದ ವೇಳೆ ಡಾ. ಕೆ. ಮಹದೇವ್ ನಡೆಸಿರುವ ಭ್ರಷ್ಟಾಚಾರ ಕುರಿತು ಕಾನೂನು ತನಿಖೆ ನಡೆಸಲಾಗುವುದು ಹಾಗೂ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದರು.  ಉಪಾಧ್ಯಕ್ಷ ಅ. ದೇವೇಗೌಡ, ಆಡಳಿತ ಮಂಡಳಿ ಸದಸ್ಯ ಕೆ. ಕೃಷ್ಣಮೂರ್ತಿ, ಮಾಜಿ ಪ್ರಧಾನ ಕಾರ್ಯದರ್ಶಿ ಎಚ್.ಕೆ. ರಮೇಶ್, ಸದಸ್ಯ ಎನ್. ಪ್ರಸನ್ನ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement