ನಾಳೆ ರಾಜ್ಯ ಮಟ್ಟದ ಅಂಗವಿಕಲರ ಕ್ರೀಡಾಕೂಟ
ಮೈಸೂರು: ಪರಿವರ್ತನಂ ಸಂಸ್ಥೆಯು ಫೆ.25ರಂದು ನಗರದ ಓವಲ್ ಮೈದಾನದಲ್ಲಿ ರಾಜ್ಯ ಮಟ್ಟದ ಅಂಗವಿಕಲರ ಕ್ರೀಡಾಕೂಟ ಆಯೋಜಿಸಿದೆ.
ಕ್ರೀಡಾಕೂಟದಲ್ಲಿ ದೈಹಿಕ ಅಂಗವಿಕಲರು, ದೃಷ್ಟಿದೋಷವುಳ್ಳವರು, ಶ್ರವಣ ದೋಷವುಳ್ಳವರು, ಕುಬ್ಜರಿಗಾಗಿ ವಿವಿಧ ಆಟೋಟಗಳನ್ನು ಏರ್ಪಡಿಸಲಾಗಿದೆ. ರಾಜ್ಯದ ಇತರೆಡೆಯಿಂದ ಆಗಮಿಸುವ ಕ್ರೀಡಾಪಟುಗಳಿಗೆ ಉಳಿದುಕೊಳ್ಳಲು ನಂಜರಾಜ ಛತ್ರದಲ್ಲಿ ವ್ಯವಸ್ಥೆ ಮಾಡಲಾಗಿದೆ. ಸುಮಾರು 500ಕ್ಕೂ ಹೆಚ್ಚು ಮಂದಿ ಕ್ರೀಡಾಕೂಟದಲ್ಲಿ ಭಾಗವಹಿಸುವ ನಿರೀಕ್ಷೆ ಇದ್ದು, ಫೆ.25ರ ಬೆಳಗ್ಗೆ 7.30ಕ್ಕೆ ನಂಜರಾಜ ಛತ್ರದಿಂದ ಓವಲ್ ಮೈದಾನದವರೆಗೆ ಪಾದಯಾತ್ರೆ ಮೂಲಕ ಮೆರವಣಿಗೆ ನಡೆಸಲಾಗುತ್ತದೆ.
ಅನುಕಂಪ ಬೇಡ ಅವಕಾಶ ಕೊಡಿ...: ಈ ಕ್ರೀಡಾಕೂಟದಲ್ಲಿ 'ಅನುಕಂಪ ಬೇಡ ಅವಕಾಶ ಕೊಡಿ' ಎಂಬ ಸಂದೇಶವನ್ನು ಪರಿವರ್ತನಂ ವಿಕಲಚೇತನರ ಸಂಸ್ಥೆಯ ಮೂಲಕ ಸಮಾಜಕ್ಕೆ ಕರೆ ನೀಡಲಾಗುವುದು. ಪ್ರತಿಭೆ, ಬುದ್ಧಿ, ಶಕ್ತಿ ಸಾಮರ್ಥ್ಯವನ್ನು ಪರಿಗಣಿಸಿ ವಿವಿಧ ಕ್ಷೇತ್ರಗಳಲ್ಲಿ ಮೀಸಲಿರುವ ವ್ಯವಸ್ಥೆಗಳಲ್ಲಿ, ವೃತ್ತಿಪರ, ದೃಷ್ಟಿಕೋನದಲ್ಲಿ ಅವಕಾಶ ಕಲ್ಪಿಸಿಕೊಡುವಂತೆ ಅಧ್ಯಕ್ಷ ವಿನಯ್ ಕಣಗಾಲ್ ತಿಳಿಸಿದ್ದಾರೆ. ಮೊ. 9845133927 ಸಂಪರ್ಕಿಸಿ.