ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಮೈಸೂರು

ಶಿಕ್ಷಕರ 6ನೇ ವೇತನ ಪರಿಷ್ಕರಣೆ: ಮರಿತಿಬ್ಬೇಗೌಡ

Mainashree
Updated On : 23 Feb 2014, 10:41 am

ಮೈಸೂರು: ಪ್ರೌಢಶಾಲಾ ಸಹ ಶಿಕ್ಷಕರ 6ನೇ ವೇತನವನ್ನು ಪರಿಷ್ಕರಣೆ ಮಾಡಲು ಶಿಕ್ಷಣ ಸಚಿವ ಕಿಮ್ಮನೆ ರತ್ನಾಕರ್ ಒಪ್ಪಿದ್ದಾರೆ ಎಂದು ಶಾಸಕ ಮರಿತಿಬ್ಬೇಗೌಡ ತಿಳಿಸಿದ್ದಾರೆ.
ಇತ್ತೀಚೆಗೆ ನಡೆದ ವಿಧಾನ ಪರಿಷತ್ ಕಲಾಪದಲ್ಲಿ ತಮ್ಮ ಪ್ರಶ್ನೆಗೆ ಸಚಿವರು ಉತ್ತರಿಸಿ, ಪ್ರೌಢಶಾಲಾ ಸಹ ಶಿಕ್ಷಕರ ವೇತನ ಪರಿಷ್ಕರಣೆಗೆ ಸಂಬಂಧಿಸಿದಂತೆ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಕಾರ್ಯದರ್ಶಿಗಳ ನೇತೃತ್ವದಲ್ಲಿ ರಚಿಸಿದ್ದ ಸಮಿತಿಯು ನೀಡಿದ ವರದಿಯನ್ನು ಸರ್ಕಾರವು ಗಣನೆಗೆ ತೆಗೆದುಕೊಂಡು ಸೂಕ್ತ ಶಿಫಾರಸಿನೊಂದಿಗೆ ಅನುಷ್ಠಾನಕ್ಕಾಗಿ ಅಧಿಕಾರಿ ವೇತನ ಸಮಿತಿಗೆ ಸಲ್ಲಿಸಲಾಗಿದೆ. ಅದರಂತೆ ಅಧಿಕಾರಿಗಳ 6ನೇ ವೇತನ ಸಮಿತಿಯು ಈ ಸಹ ಶಿಕ್ಷಕರಿಗೆ ವೇತನ ಪರಿಷ್ಕರಣೆ ಮಾಡಿದೆ ಎಂದಿದ್ದಾರೆ. 6ನೇ ವೇತನ ಆಯೋಗದ ಪ್ರಕಾರ ಸಹ ಶಿಕ್ಷಕರಿಗೆ 17650- 32000, ಕಾಲಮಿತಿ ವೇತನ ಬಡ್ತಿ- 19000- 34500, ಸ್ವಯಂಚಾಲಿತ ವೇತನ ಬಡ್ತಿ- 20000- 36300, 20 ವರ್ಷ ಪೂರ್ಣಗೊಳಿಸಿರುವ ಶಿಕ್ಷಕರಿಗೆ 21600- 40500 ರು. ವೇತವನ್ನು ಪರಿಷ್ಕರಿಸಲಾಗಿದೆ. ಪದವಿಪೂರ್ವ ಕಾಲೇಜಿನ ಉಪನ್ಯಾಸಕರ ವೇತನ ಶ್ರೇಣಿಯನ್ನು 22800- 43200ಕ್ಕೆ ಪರಿಷ್ಕರಿಸಲಾಗಿದೆ ಎಂದು ತಮಗೆ ಮಾಹಿತಿ ನೀಡಿದ್ದಾರೆ.
ವರದಿ ನೀಡುವ ದಿನಾಂಕದಲ್ಲಿ ಅಂದಾಜಿಸಿದಂತೆ ಸರ್ಕಾರಿ ಮತ್ತು ಅನುದಾನಿತ ಶಿಕ್ಷಕರ ಸಂಖ್ಯೆ ಒಟ್ಟು 62557 ಇದ್ದು, 2009-10ನೇ ಸಾಲಿನಿಂದ 2011-12ನೇ ಸಾಲಿನವರೆಗೆ ನೇಮಕಾತಿ ಅನುಮೋದನೆಯಾದ 4433 ಶಿಕ್ಷಕರನ್ನು ಹೊರತುಪಡಿಸಿ, ಉಳಿದ 58124 ಶಿಕ್ಷಕರಿಗೆ ಅವರು ಪಡೆಯುತ್ತಿರುವ ವೇತನ ಶ್ರೇಣಿ (8000- 14800)ಯಲ್ಲಿ ಗರಿಷ್ಠ ಮಟ್ಟದ ವೇತನ ಬಡ್ತಿ 400 ಪರಿಗಣಿಸಿ, ಲೆಕ್ಕಾಚಾರ ಮಾಡಿದಲ್ಲಿ ಸರ್ಕಾರಕ್ಕೆ ಅಂದಾಜು ವೆಚ್ಚ 48.5 ಕೋಟಿ ಹೆಚ್ಚುವರಿ ವೆಚ್ಚ ಬರುತ್ತದೆ. ಪಿಯು ಉಪನ್ಯಾಸಕರಿಗೆ ಸಂಬಂಧಿಸಿದಂತೆ ವರದಿ ನೀಡಿದ ದಿನಾಂಕಕ್ಕೆ ವಾರ್ಷಿಕ ವೆಚ್ಚ 4436.52 ಲಕ್ಷಗಳೆಂದು ಅಂದಾಜಿಸಲಾಗಿದೆ ಎಂಬ ಮಾಹಿತಿ ತಮಗೆ ಲಭಿಸಿದೆ ಎಂದು ಮರಿತಿಬ್ಬೇಗೌಡ ತಿಳಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement