ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಮೈಸೂರು

ಡಾ. ವಾಮದೇವಗೆ ಎಫ್ಐಸಿಪಿ ಪ್ರಶಸ್ತಿ

Rashmi Kasaragodu
Updated On : 25 Feb 2014, 2:19 am

ಮೈಸೂರು: ಪಂಜಾಬ್ನ ಲೂದಿಯಾನದಲ್ಲಿ ನಡೆದ 69ನೇ ರಾಷ್ಟ್ರ ಮಟ್ಟದ ಭಾರತೀಯ ವೈದ್ಯಶಾಸ್ತ್ರ ತಜ್ಞರ ಸಂಘದ ಅಧಿವೇಶನದಲ್ಲಿ ಮೈಸೂರಿನ ಸಾಂಕ್ರಾಮಿಕ ರೋಗಗಳ ಆಸ್ಪತ್ರೆಯ ವೈದ್ಯಾಧಿಕಾರಿ ಡಾ.ಜಿ.ಎಂ. ವಾಮದೇವ ಅವರಿಗೆ ಎಫ್ಐಸಿಪಿ ಪ್ರಶಸ್ತಿ ನೀಡಿ ಪುರಸ್ಕರಿಸಲಾಗಿದೆ.
ಡಾ. ವಾಮದೇವ ಅವರು ಚಿಕ್ಕಮಗಳೂರು ಜಿಲ್ಲೆ ಕಡೂರು ತಾಲೂಕಿನ ಗಿರಿಯಾಪುರ ಹಳ್ಳಿಯಲ್ಲಿ ಬಿ.ಎನ್. ಮರುಳಪ್ಪ ಮತ್ತು ಶಾಂತಮ್ಮ ಅವರ ಪುತ್ರ. 1981ರಲ್ಲಿ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಶಸ್ತ್ರಚಿಕಿತ್ಸಾ ವಿಭಾಗದಲ್ಲಿ ಸೀನಿಯರ್ ರೆಸಿಡೆಂಟ್ ಆಗಿ ಸೇವೆ ಆರಂಭಿಸಿದ ಇವರು ಹೆಚ್ಚು ಸಂತಾನಹರಣ ಶಸ್ತ್ರಚಿಕಿತ್ಸೆಗಳನ್ನು ಪ್ರಾಥಮಿಕ ಆರೋಗ್ಯ ಘಟಕದಲ್ಲಿ ಮಾಡಿಸಿದ ಉತ್ತಮ ಸಾಧನೆಗಾಗಿ ರಾಜ್ಯ ಮಟ್ಟದ ನಗದು ಹಾಗೂ ಪ್ರಶಂಸನಾ ಪತ್ರ ಪಡೆದರು.
ಪ್ರಸ್ತುತ 2009ರಿಂದ ಈವರೆಗೆ ನಗರದ ಸಾಂಕ್ರಾಮಿಕ ರೋಗಗಳ ಆಸ್ಪತ್ರೆಯಲ್ಲಿ ಜಿಲ್ಲಾ ಶಸ್ತ್ರಚಿಕಿತ್ಸಕರಾಗಿ, ವೈದ್ಯಾಧಿಕಾರಿಗಳಾಗಿ ಸೇವೆ ಸಲ್ಲಿಸುತ್ತಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement