ರೈಲು ಚಲಿಸುವಾಗಲೂ ಹನಿ ಹಾಕಲು ವ್ಯವಸ್ಥೆ
ನಗರದ ನೈಋತ್ಯ ರೇಲ್ವೆ ಆಸ್ಪತ್ರೆಯಲ್ಲಿ ಎರಡನೇ ಸುತ್ತಿನ ಪೋಲಿಯೊ ಹನಿ ಕಾರ್ಯಕ್ರಮವನ್ನು ಭಾನುವಾರ ಹಮ್ಮಿಕೊಳ್ಳಲಾಗಿತ್ತು. ವಿಭಾಗೀಯ ವೈದ್ಯಕೀಯ ಅಧಿಕಾರಿ ಡಾ. ಎಲ್. ಮಹೇಂದ್ರ ಮಗುವಿಗೆ ಪೋಲಿಯೊ ಹನಿ ಹಾಕುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿ, ರೈಲು ನಿಲ್ದಾಣದ ವಿವಿಧ ಭಾಗಗಳಲ್ಲಿ ಪೋಲಿಯೊ ಬೂತ್ ಸ್ಥಾಪಿಸಲಾಗಿದೆ. ರೈಲು ಚಲಿಸುವಾಗಲು ಹನಿ ಹಾಕಲು ಸೂಕ್ತ ವ್ಯವಸ್ಥೆ ಮಾಡಲಾಗಿದ್ದು, ಫೆ.26ರವರೆಗೆ ಈ ಕಾರ್ಯಕ್ರಮ ಮುಂದುವರೆಯಲಿದೆ ಎಂದರು.