ಮರ್ಸಿ ಕಾನ್ವೆಂಟ್ಗೆ ಸಮಗ್ರ ಬಹುಮಾನ
ಮೈಸೂರು: ರಾಜ್ಯ ಅಂಗವಿಕಲರ ಕ್ರೀಡಾಕೂಟದ ಸಮಗ್ರ ಬಹುಮಾನವನ್ನು ಮೈಸೂರಿನ ಮರ್ಸಿ ಕಾನ್ವೆಂಟ್ ಶಾಲೆಯು ತನ್ನದಾಗಿಸಿಕೊಂಡಿದೆ.
ಓವೆಲ್ ಮೈದಾನದಲ್ಲಿ ಮಂಗಳವಾರ ಬೆಂಗಳೂರಿನ ಕರ್ನಾಟಕ ಅಂಗವಿಕಲರ ಕ್ರೀಡಾ ಸಂಸ್ಥೆ ಮತ್ತು ನಗರದ ಪರಿವರ್ತನಂ ವಿಕಲಚೇತನರ ಸಂಸ್ಥೆಯ ಸಹಯೋಗದಲ್ಲಿ ಆಯೋಜಿಸಿದ್ದ ಈ ಕ್ರೀಡಾಕೂಟದಲ್ಲಿ ಉತ್ತಮ ಪ್ರದರ್ಶನ ನೀಡಿದ ಮರ್ಸಿ ಕಾನ್ವೆಂಟ್ ಶಾಲೆಯ ವಿದ್ಯಾರ್ಥಿಗಳು 11 ಚಿನ್ನ, 9 ಬೆಳ್ಳಿ, 13 ಕಂಚಿನ ಪದಕ ಪಡೆದುಕೊಂಡರು.
ಡಬಲ್ ಕ್ಲಚ್ಚಸ್ 100 ಮೀ. ಪುರುಷರ ಓಟದಲ್ಲಿ ಚೌಡಯ್ಯ ಪ್ರಥಮ, ಭರಮಪ್ಪ ದ್ವಿತೀಯ, ಬೋರೇಗೌಡ ತೃತೀಯ, ಡಬಲ್ ಕ್ಲಚ್ಚಸ್ 100 ಮೀ. ಮಹಿಳೆಯರ ಓಟದಲ್ಲಿ ಡಿ.ಕೆ. ಸುನಂದಮ್ಮ ಪ್ರಥಮ, ಸವಿತಾ ದ್ವಿತೀಯ, ಸಿದ್ದಗಂಗಮ್ಮ ತೃತೀಯ, 100 ಮೀ. ಬಾಲಕಿಯರ ಓಟದಲ್ಲಿ ತತ್ತಿ ಪ್ರಥಮ, ಮಧುಶ್ರೀ ದ್ವಿತೀಯ, ವಿದ್ಯಾರಾಣಿ ತೃತೀಯ, 100 ಮೀ. ಶ್ರವಣ ದೋಷ ಉಳ್ಳವರು ಮತ್ತು ಮಹಿಳೆಯರ ಓಟದಲ್ಲಿ ಶೃತಿ ಪ್ರಥಮ, ಕೃತಿಕಾ ದ್ವಿತೀಯ, ಶ್ವೇತಾ ತೃತೀಯ ಸ್ಥಾನ ಗಳಿಸಿದ್ದಾರೆ.
ಜಾವಲಿನ್ ಥ್ರೋ ಪುರುಷರ ವಿಭಾಗದಲ್ಲಿ ಚೇತನ್ ಪ್ರಥಮ, ಅಜ್ಜಪ್ಪ ಮುತ್ತಗಿ ದ್ವಿತೀಯ, ವಿಠಲ್ ಪಿ. ಲಮಾಣಿ ತೃತೀಯ, ಗುಂಡು ಎಸೆತ ಪುರುಷರ ವಿಭಾಗದಲ್ಲಿ ಮುತ್ತುರಾಜ್ ಪ್ರಥಮ, ವೆಂಕಟೇಶ್ ಕುಮಾರ್ ದ್ವಿತೀಯ, ರಮೇಶ್ ಎನ್. ದನಗಾರ ತೃತೀಯ, ಗುಂಡು ಎಸೆತ ಕಾಲು ಇಲ್ಲದವರು ಮತ್ತು ಪುರುಷರ ವಿಭಾಗದಲ್ಲಿ ಬೊಮ್ಮಪ್ಪ ಬಿಳಗಿ ಪ್ರಥಮ, ಬೋರೇಗೌಡ ದ್ವಿತೀಯ, ಆರ್.ಎಂ. ಸ್ವಾಮಿ ತೃತೀಯ ಬಹುಮಾನ ಪಡೆದಿದ್ದಾರೆ.
ಮೈಸೂರು ವಿವಿ ಓವೆಲ್ ಮೈದಾನದಲ್ಲಿ ಮಂಗಳವಾರ ಪರಿವರ್ತನಂ ಸಂಸ್ಥೆ ಆಯೋಜಿಸಿದ್ದ ರಾಜ್ಯಮಟ್ಟದ ಅಂಗವಿಕಲರ ಕ್ರೀಡಾಕೂಟ ಸಾಮಾನ್ಯರನ್ನು ನಾಚಿಸುವಂತಿತ್ತು. ಏನಿಲ್ಲದಿದ್ದರೇನು ತಾವು ಯಾರಿಗೇನು ಕಡಿಮೆ ಇಲ್ಲ ಎಂಬುದನ್ನು ಸಾಬೀತುಪಡಿಸಿತು.
8 ವರ್ಷ ಒಳಗಿನ, 8 ರಿಂದ 12 ವರ್ಷ, 12 ರಿಂದ 18 ವರ್ಷ, 18 ವರ್ಷ ಮೇಲ್ಪಟ್ಟ ಪುರುಷರ ಮತ್ತು ಮಹಿಳೆಯರ ವಿಭಾಗದಲ್ಲಿ ನಡೆದ ಗುಂಡು ಎಸತೆ, ಜಾವಲಿನ್ ಎಸೆತ, ಓಟದ ಸ್ಪರ್ಧೆಯಲ್ಲಿ ಮೈಸೂರು, ಬೆಂಗಳೂರು, ಮಂಗಳೂರು, ಹುಬ್ಬಳ್ಳಿ, ಹಾವೇರಿ, ರಾಮನಗರ, ದಾವಣಗೆರೆ, ಶಿವಮೊಗ್ಗ ಸೇರಿದಂತೆ ರಾಜ್ಯ ವಿವಿಧ ಜಿಲ್ಲೆಗಳ ಸ್ಪರ್ಧಿಗಳು ಭಾಗವಹಿಸಿದ್ದರು. ಸ್ಪರ್ಧಿಗಳ ಕೊರತೆಯಿಂದಾಗಿ ಗಾಲಿ ಕುರ್ಚಿ ವಿಭಾಗದ ಆಟ ರದ್ದುಪಡಿಸಿದ್ದು ಹಲವರಿಗೆ ಬೇಸರವನ್ನುಂಟು ಮಾಡಿತು.
ಕ್ರೀಡಾಕೂಟ ಉದ್ಘಾಟಿಸಿದ ಮೈಸೂರು ವಿವಿ ಕುಲಪತಿ ಪ್ರೊ.ಕೆ.ಎಸ್. ರಂಗಪ್ಪ ಮಾತನಾಡಿ, ಅಂಗವಿಕಲರಿಗೆ ಆಟೋಟ ಆಯೋಜಿಸುವುದರಿಂದ ಅವರಲ್ಲಿ ಆತ್ಮಸ್ಥೈರ್ಯ ತುಂಬಲು ಸಾಧ್ಯವಾಗುತ್ತದೆ. ಅಂಗವಿಕಲರಿಗೆ ಅನುಕಂಪದ ಬದಲು, ಅವಕಾಶ ನೀಡಿದರೆ ಉಜ್ವಲ ಭವಿಷ್ಯ ರೂಪುಗೊಳ್ಳುತ್ತದೆ ಎಂದರು.
ಯುವ ಕಾಂಗ್ರೆಸ್ ಮುಖಂಡ ಸಿ.ಎಸ್.ರಘು, ಜಿಲ್ಲಾ ಸಹಕಾರಿ ಯೂನಿಯನ್ ಅಧ್ಯಕ್ಷ ರಾಜೀವ್, ವಿಜಯ ಬ್ಯಾಂಕ್ನ ಸಹಾಯಕ ವ್ಯವಸ್ಥಾಪಕ ನಿರ್ದೇಶಕ ಉದಯಕುಮಾರ್ ಶೆಟ್ಟಿ, ಸರ್ಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ಎಚ್.ಕೆ. ರಾಮು, ಕರ್ನಾಟಕ ಅಂಗವಿಕಲರ ಸಂಘದ ಅಧ್ಯಕ್ಷ ಎ.ವಿ.ರೈ, ಪತ್ರಕರ್ತರ ಸಂಘದ ಕಾರ್ಯದರ್ಶಿ ದೀಪಕ್ ಇದ್ದರು.