ಮುಕ್ತ ವಿವಿ ಸಂಪರ್ಕ ಕಾರ್ಯಕ್ರಮ
ಮೈಸೂರು: ಕರ್ನಾಟಕ ರಾಜ್ಯ ಮುಕ್ತ ವಿವಿ ಮನೋವಿಜ್ಞಾನ ಅಧ್ಯಯನ ವಿಭಾಗವು 2013-14ನೇ ಸಾಲಿನ ಅಂತಿಮ ಬಿ.ಎ ಮನೋವಿಜ್ಞಾನದ ವಿದ್ಯಾರ್ಥಿಗಳಿಗೆ ಮಾ. 3ರಿಂದ 9ರವರೆಗೆ ಪ್ರಾಯೋಗಿಕ ವಿಷಯಗಳಿಗೆ ಸಂಬಂಧಿಸಿದಂತೆ ರಾಜ್ಯ ಮುಕ್ತ ವಿವಿ ಆವರಣದಲ್ಲಿರುವ ಗಂಗಾ ಕಟ್ಟಡದಲ್ಲಿ ಸಂಪರ್ಕ ಕಾರ್ಯಕ್ರಮ ಮತ್ತು ಪ್ರಾಯೋಜಿಕ ಪರೀಕ್ಷೆ ಏರ್ಪಡಿಸಿದೆ. ಬೆಂಗಳೂರು ಕೇಂದ್ರದಲ್ಲಿ ಮಹಾರಾಣಿ ಮಹಿಳಾ ಕಲಾ ಮತ್ತು ವಾಣಿಜ್ಯ ಕಾಲೇಜಿನಲ್ಲಿ ಮಾ. 7ರಿಂದ 12ರವರೆಗೆ ಸಂಪರ್ಕ ಕಾರ್ಯಕ್ರಮ ಮತ್ತು ಪ್ರಾಯೋಗಿಕ ಪರೀಕ್ಷೆ ಏರ್ಪಡಿಸಿದೆ. ಹೆಚ್ಚಿನ ಮಾಹಿತಿಗಾಗಿ ಸಹಾಯಕ ಪ್ರಾಧ್ಯಾಪಕಿ ಎಸ್. ಸುರ್ಮ, ಮೊ. 9945112468, ಡಾ.ಪಿ. ಮಂಜುನಾಥ್, ಮೊ. 9342100239 ಮತ್ತು ಪಿ. ಮಹದೇವಸ್ವಾಮಿ, ಮೊ. 9880239670 ಸಂಪರ್ಕಿಸಬಹುದು.