ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಮೈಸೂರು

ಶಿಕ್ಷಕನ ಅಮಾನತು ಆದೇಶ ವಾಪಸ್ಗೆ ಆಗ್ರಹ

Rashmi Kasaragodu
Updated On : 26 Feb 2014, 1:20 am

ಎಚ್.ಡಿ. ಕೋಟೆ: ತಾಲೂಕಿನ ವಿಶ್ವಕರ್ಮ ಕಾಲೋನಿಯ ಶಾಲೆಯಲ್ಲಿ ಶಿಕ್ಷಕ ಪ್ರಸನ್ನಕುಮಾರ್ ಅವರ ಅಮಾನತು ಆದೇಶವನ್ನು ಹಿಂಪಡೆಯುವಂತೆ ಎಸ್ಡಿಎಂಸಿ ಸದಸ್ಯರು ಒತ್ತಾಯಿಸಿದ್ದಾರೆ. ಎಸ್ಡಿಎಂಸಿ ಅಧ್ಯಕ್ಷ ವಿಶ್ವನಾಥ್ ಮಾಡಿರುವ ಅಪವಾದ ಸತ್ಯಕ್ಕೆ ದೂರವಾಗಿದ್ದು, ಶಿಕ್ಷಕ ಪ್ರಸನ್ನಕುಮಾರ್ ಅವರಿಗೆ ಆರೋಗ್ಯ ಸರಿ ಇಲ್ಲದ ಕಾರಣ ಗ್ರಾಮದ ನಾಗಣ್ಣಾಚಾರ್ ಎಂಬವರ ಮನೆಯಲ್ಲಿ ನೀರು ತರಿಸಿಕೊಂಡು, ಅವರ ಎದುರೆ ನಾಲ್ಕು ಮಾತ್ರೆಗಳನ್ನು ತೆಗೆದುಕೊಂಡಿದ್ದರು. ಆದ ಕಾರಣ ಶಾಲೆಯಲ್ಲಿ ನಾಲ್ಕು ಗಂಟೆಗಳ ಕಾಲ ಪ್ರಜ್ಞೆ ತಪ್ಪಿ ಬಿದ್ದಿದ್ದಾರೆ ಎಂದು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು. ಆದ್ದರಿಂದ ಹಿರಿಯ ಅಧಿಕಾರಿಗಳು ಮಾಧ್ಯಮದಲ್ಲಿ ವರದಿಯಾಗಿರುವ ಅಂಶವನ್ನು ಗಮನದಲ್ಲಿಟ್ಟುಕೊಂಡು ಅವರನ್ನು ಅಮಾನತ್ತು ಪಡಿಸಿರುವ ಆದೇಶವನ್ನು ಹಿಂಪಡೆಯಬೇಕು ಹಾಗೂ ಉತ್ತಮ ಶಿಕ್ಷಕ ಪ್ರಸನ್ನಕುಮಾರ್ಗೆ ಕೆಲಸಕ್ಕೆ ಹಾಜರಾಗುವಂತೆಯೂ, ಈ ಸಂಬಂಧ ಸೂಕ್ತ ತನಿಖೆ ನಡೆಸಬೇಕೆಂದು ತಿಳಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement