ಸಿಆರ್ಪಿ ಅಮಾನತು
ಹುಣಸೂರು: ತಾಲೂಕಿನ ಕಟ್ಟೆಮಳಲವಾಡಿ ಸರ್ಕಾರಿ ಶಾಲೆ ಮಕ್ಕಳು ನವೋದಯ ಪರೀಕ್ಷೆಯಿಂದ ವಂಚಿತರಾಗಲು ಕಾರಣರಾದ ಕಟ್ಟೆಮಳಲವಾಡಿ ಕ್ಷಸ್ಟರ್ನ ಸಂಪನ್ಮೂಲ ವ್ಯಕ್ತಿ ಕೆ.ಆರ್. ಮುರುಳಿ ಅವರನ್ನು ದುರ್ನಡತೆ ಹಾಗೂ ಕರ್ತವ್ಯ ನಿರ್ಲಕ್ಷ್ಯದ ಆರೋಪದ ಮೇಲೆ ಡಿಡಿಪಿಐ ಎಚ್.ಆರ್. ಬಸಪ್ಪ ಇಲಾಖೆ ವಿಚಾರಣೆ ಕಾಯ್ದಿರಿಸಿ ಸೇವೆಯಿಂದ ಅಮಾನತುಗೊಳಿಸಿ ಆದೇಶಿಸಿದ್ದಾರೆ.
ಕಟ್ಟೆಮಳಲವಾಡಿ ಸರ್ಕಾರಿ ಶಾಲೆಯ 17 ವಿದ್ಯಾರ್ಥಿಗಳ ನವೋದಯ ಪರೀಕ್ಷೆಯ ಅರ್ಜಿಗಳನ್ನು ಸ್ವೀಕರಿಸಿದ್ದ ಸಿಆರ್ಪಿ ಕೆ.ಆರ್. ಮುರುಳಿ ನಿಗದಿತ ಸಮಯದೊಳಗೆ ಬಿಇಒ ಕಚೇರಿಗೆ ತಲುಪಿಸದ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳು ಪರೀಕ್ಷೆಯಿಂದ ವಂಚಿತರಾಗಿದ್ದರು. ಈ ಬಗ್ಗೆ ಕಟ್ಟೆಮಳಲವಾಡಿಯ ವಿದ್ಯಾರ್ಥಿ ಪೋಷಕ ಪ್ರೇಮಕುಮಾರ್ ದೂರು ನೀಡಿದ್ದರು. ಈ ಬಗ್ಗೆ ಕನ್ನಡಪ್ರಭ ಪತ್ರಿಕೆ ವಿಶೇಷ ವರದಿ ಪ್ರಕಟಿಸಿದ್ದನ್ನು ಸ್ಮರಿಸಬಹುದು.