ಅಂಬಿ ಗುಣಮುಖರಾಗಲು ವಿಶೇಷ ಪೂಜೆ
ಮೈಸೂರು: ನಟ ಹಾಗೂ ವಸತಿ ಸಚಿವ ಅಂಬರೀಷ್ ಅವರು ಶೀಘ್ರ ಗುಣಮುಖರಾಗಲಿ ಎಂದು ಮೈಸೂರು ತಾಲೂಕಿನ ಕುಪ್ಪೇಗಾಲ ಮತ್ತು ಸಿದ್ದರಾಮನಹುಂಡಿಯ ಅಂಬರೀಷ್ ಅಭಿಮಾನಿ ಬಳಗದವರು ಬುಧವಾರ ವಿಶೇಷ ಪೂಜೆ ಸಲ್ಲಿಸಿದರು.
ಮೊದಲು ನಗರದ ಅರಮನೆ ಕೋಟೆ ಆಂಜನೇಯಸ್ವಾಮಿ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿದರು.
ಬಳಿಕ ಬೈಕ್ ರ್ಯಾಲಿ ಹಮ್ಮಿಕೊಂಡು ಅಲ್ಬರ್ಟ್ ವಿಕ್ಟರ್ ರಸ್ತೆ, ಹಾರ್ಡಿಂಜ್ ವೃತ್ತ, ಮೃಗಾಲಯ, ರೇಸ್ ಕೋರ್ಸ್ ಮೂಲಕ ಚಾಮುಂಡಿಬೆಟ್ಟಕ್ಕೆ ತಲುಪಿ ತಾಯಿ ಚಾಮುಂಡೇಶ್ವರಿಗೆ ವಿಶೇಷ ಪೂಜೆ ಸಲ್ಲಿಸಿದರು. ಜಿಪಂ ಸದಸ್ಯದ ಸಿದ್ದೇಗೌಡ, ಕೆಎಂಎಫ್ ನಿರ್ದೇಶಕ ಉಮಾಶಂಕರ್, ಅಂಬರೀಷ್ ಅಭಿಮಾನಿ ಬಳಗದ ರಾಜ್ಯಾಧ್ಯಕ್ಷ ಎನ್. ಕಿರಣ್, ಮುಖಂಡರಾದ ಅನಿಲ್ಕುಮಾರ್, ರಮೇಶ್, ಮಂಚೇಗೌಡ, ಗಿರೀಶ್ ಇದ್ದರು.