ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಮೈಸೂರು

'ಅಗ್ನಿಶಾಮಕ ಠಾಣೆಗೆ ನಿಖರ ಮಾಹಿತಿ ನೀಡಿ'

Rashmi Kasaragodu
Updated On : 27 Feb 2014, 1:30 am

ಸಾಲಿಗ್ರಾಮ: ಸರ್ಕಾರಿ ಪ್ರಥಮ ದರ್ಜೆ ಕಾಲೇಜು ವತಿಯಿಂದ ಬೆಟ್ಟಹಳ್ಳಿಯಲ್ಲಿ ರಾಷ್ಟ್ರೀಯ ಸೇವಾ ಯೋಜನೆಯ ವಾರ್ಷಿಕ ವಿಶೇಷ ಶಿಬಿರದಲ್ಲಿ ಅಗ್ನಿಶಮನ ಕುರಿತ ಉಪನ್ಯಾಸ ಹಾಗೂ ಪಾತ್ಯಕ್ಷಿಕೆ ನಡೆಯಿತು.
ಅಗ್ನಿಶಾಮಕ ಅಧಿಕಾರಿ ರುದ್ರೇಗೌಡ ಮಾತನಾಡಿ, ಯಾವುದೇ ತುರ್ತು ಪರಿಸ್ಥಿತಿಯಲ್ಲಿ ಅಗ್ನಿಶಾಮಕ ಠಾಣೆಗೆ ನಿಖರ ಮಾಹಿತಿ ನೀಡಿ, ಮುಂದಾಗಬಹುದಾದ ಅನಾಹುತ ತಡೆಗಟ್ಟುವಲ್ಲಿ ವಿದ್ಯಾರ್ಥಿಗಳು ಮತ್ತು ಸ್ವಯಂ ಸೇವಕರ ಪಾತ್ರ ಅತಿ ಮುಖ್ಯ ಹಾಗೂ ಅಗ್ನಿಶಾಮಕ ಠಾಣೆಯಿಂದ ಸಿಗುವ ಸವಲತ್ತುಗಳ ಬಗ್ಗೆ ತಿಳಿಸಿದರು.
ಗ್ರಾಮೀಣ ಭಾಗದಲ್ಲಿ ಹುಲ್ಲಿನ ಬಣವೆ, ತಂಬಾಕು ಹದಗೊಳಿಸುವ ಬ್ಯಾರನ್, ಮನೆ, ಗುಡಿಸಲು ಇನ್ನಿತರೆ ಪ್ರದೇಶದಲ್ಲಿ ಆಗುವ ಅಗ್ನಿ ದುರಂತಗಳನ್ನು ತಡೆಗಟ್ಟುವ ಸಂಬಂಧ ಮುಂಜಾಗೃತಾ ಕ್ರಮಗಳ ಬಗ್ಗೆ ಮಾಹಿತಿ ನೀಡಿದರು.
ಪ್ರಾಧ್ಯಾಪಕರಾದ ಕೃಷ್ಣೇಗೌಡ, ಭವಾನಿ, ಕಾಲೇಜು ಅಭಿವೃದ್ಧಿ ಸಮಿತಿ ಸದಸ್ಯ ನಂಜಪ್ಪಶೆಟ್ಟಿ, ಅಗ್ನಿಶಾಮಕ ಠಾಣೆಯ ರುದ್ರೇಗೌಡ, ಸಿಬ್ಬಂದಿ ರವಿ, ಮಧು, ರಮೇಶ್, ಶಿಬಿರಾಧಿಕಾರಿ ಕುಮಾರ್, ಉಪನ್ಯಾಸಕರಾದ ಜಗದೀಶ್, ಕುಮಾರಸ್ವಾಮಿ, ಶ್ರೀಕಾಂತ್ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement