ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಮೈಸೂರು

ಇಂದು ಬಿಎಸ್‌ವೈ ಹುಟ್ಟುಹಬ್ಬ; ವಿಶೇಷ ಪೂಜೆ

Rashmi Kasaragodu
Updated On : 27 Feb 2014, 1:29 am

ಮೈಸೂರು: ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ 72ನೇ ಹುಟ್ಟುಹಬ್ಬದ ಅಂಗವಾಗಿ ಫೆ. 27ರಂದು ಅಗ್ರಹಾರದ 101 ಗಣಪತಿ ದೇವಸ್ಥಾನದಲ್ಲಿ ವಿಶೇಷ ಪೂಜೆ ಏರ್ಪಡಿಸಿದೆ. ಕರ್ನಾಟಕ ಬಿ.ಎಸ್.ಯಡಿಯೂರಪ್ಪ ಯುವಸೇನೆಯು ಬೆಳಗ್ಗೆ 10ಕ್ಕೆ ಏರ್ಪಡಿಸಿರುವ ಈ ಕಾರ್ಯಕ್ರಮದಲ್ಲಿ ಗಣಪತಿಗೆ ವಿಶೇಷ ಅಭಿಷೇಕ ಹಾಗೂ ಪೂಜೆ ಸಲ್ಲಿಸಿ, ಯಡಿಯೂರಪ್ಪ ಅವರಿಗೆ ಯಶಸ್ಸು ಹಾಗೂ ಆರೋಗ್ಯ ಕೋರಲಾಗುವುದು ಎಂದು ಯುವಸೇನೆ ರಾಜ್ಯಾಧ್ಯಕ್ಷ ಎಲ್. ರುದ್ರಮೂರ್ತಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.    
ಹೊಸಮಠದ ಚಿದಾನಂದ ಸ್ವಾಮೀಜಿ, ಕುದೇರು ಮಠದ ಮಹಂತ ಸ್ವಾಮೀಜಿ ಹಾಗೂ ಕುಂದುರ ಮಠ, ಮಡಿವಾಳ ಮಠದ ನೀಲಕಂಠೇಸ್ವಾಮಿ ಮಠ ಹಾಗೂ ಪಂಚಗವಿ ಮಠದ ಸ್ವಾಮೀಜಿಗಳು ಭಾಗವಹಿಸುವರು ಎಂದರು.  
ಹಣ್ಣು ವಿತರಣೆ: ಯಡಿಯೂರಪ್ಪ ಅವರ ಹುಟ್ಟುಹಬ್ಬದ ಅಂಗವಾಗಿ ಮಾ.2ರಂದು ಬೆಳಗ್ಗೆ 11ಕ್ಕೆ ಅಗ್ರಹಾರದ ಜೆಎಸ್‌ಎಸ್ ಅಸ್ಪತ್ರೆಯ ರೋಗಿಗಳಿಗೆ ಹಣ್ಣು ವಿತರಿಸಲಾಗುವುದು.
ಮುಖಂಡರಾದ ವೃಷಭೇಂದ್ರ ಸ್ವಾಮಿ, ಎಚ್.ವಿ ಗಿರೀಶ್, ನಂಜುಂಡಸ್ವಾಮಿ, ಜಯಣ್ಣ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement