ಕುದೇರಿಗೆ ಕುಡಿವ ನೀರು: ಸಚಿವ ಎಚ್. ಕೆ.ಪಾಟೀಲ್
ಮೈಸೂರು: ಚಾಮರಾಜನಗರ ಜಿಲ್ಲೆಯ ಕುದೇರು ಗ್ರಾಮಕ್ಕೆ ಕುಡಿಯುವ ನೀರನ್ನು ಒದಗಿಸಲು ಉಮ್ಮತ್ತೂರು ರಸ್ತೆಯಲ್ಲಿ ಹೊಸದಾಗಿ ಮೂರು ಬೋರ್ವೆಲ್ಗಳನ್ನು ತೋಡಲಾಗಿದ್ದು, ಗ್ರಾಮದಲ್ಲಿ ಹಾಲಿ ಇರುವ ಕುಡಿಯುವ ನೀರಿನ ವ್ಯವಸ್ಥೆಗೆ ಜೋಡಣೆ ಮಾಡುವ ಮೂಲಕ ಕುಡಿಯುವ ನೀರಿನ ಸೌಲಭ್ಯ ಕಲ್ಪಿಸಲಾಗಿದೆ ಎಂದು ಗ್ರಾಮೀಣ ಅಭಿವೃದ್ಧಿ ಸಚಿವ ಎಚ್. ಕೆ. ಪಾಟೀಲ್ ವಿಧಾನ ಪರಿಷತ್ತಿಗೆ ತಿಳಿಸಿದರು.
ಕಳೆದ ವಾರ ವಿಧಾನಪರಿಷತ್ ಸದಸ್ಯ ಸಂದೇಶ್ ನಾಗರಾಜ್ ಅವರು ಶೂನ್ಯ ವೇಳೆಯಲ್ಲಿ ಮಾಡಿದ್ದ ಪ್ರಸ್ತಾಪಕ್ಕೆ ಅವರು ಮಂಗಳವಾರ ಉತ್ತರ ನೀಡಿದರು. ಕಮರವಾಡಿ ಗ್ರಾಮದಿಂದ ಕುದೇರಿಗೆ ನೀರು ಸರಬರಾಜು ಮಾಡುವ ಬಗ್ಗೆ ಪೈಪ್ಲೈನ್ ಹಾಕಲು 50 ಲಕ್ಷ ಮಂಜೂರು ಮಾಡಿ ಟೆಂಡರ್ ಕರೆಯಲಾಗಿದೆ. ಟೆಂಡರ್ ಅಂಗಿಕರಿಸಿ ಪೈಪ್ಲೈನ್ ಹಾಕಲು ತಕ್ಷಣ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಸಚಿವರು ತಿಳಿಸಿದರು. ಕುದೇರು ಗ್ರಾಮದಲ್ಲಿ 19 ಬೋರ್ವೆಲ್ ಇದ್ದು 6 ವಿಫಲವಾಗಿವೆ. ಇನ್ನು 7 ಕೆಟ್ಟು ಹೋಗಿದ್ದು ಅದನ್ನು ಸರಿಪಡಿಸಲು ಕ್ರಮ ಕೈಗೊಳ್ಳಲಾಗಿದೆ ಎಂದರು.