ಕ್ಯಾಥೋಲಿಕ್ ಸಿರಿಯನ್ ಬ್ಯಾಂಕ್ ಉದ್ಘಾಟನೆ
ನಂಜನಗೂಡು: ಪಟ್ಟಣದ ಆರ್.ಪಿ. ರಸ್ತೆಯಲ್ಲಿ 20ನೇ ಕ್ರಾಸ್ನಲ್ಲಿ ಕ್ಯಾಥೋಲಿಕ್ ಸಿರಿಯನ್ ಬ್ಯಾಂಕ್ನ 117ನೇ ಶಾಖೆಯನ್ನು ಸಮಾಜ ಸೇವಕ ಯು.ಎನ್. ಪದ್ಮನಾಭ್ರಾವ್ ಉದ್ಘಾಟಿಸಿದರು.
ನಂತರ ಅವರು ಮಾತನಾಡಿ, ಗ್ರಾಹಕರ ಅನುಕೂಲಕ್ಕಾಗಿಯೇ ಪ್ರಾರಂಭವಾಗಿರುವ ಈ ಬ್ಯಾಂಕ್ ಯಶಸ್ವಿಯಾಗಿ ನಡೆಯಲಿ ಎಂದು ಶುಭ ಹಾರೈಸಿದರು.
ವ್ಯವಸ್ಥಾಪಕ ನಿರ್ದೇಶಕ ರಾಕೇಶ್ಭಾಟಿಯಾ, ವಲಯ ವ್ಯವಸ್ಥಾಪಕ ಅಜಿತ್ ಪ್ರಭಾಕರ್, ಶಾಖಾ ವ್ಯವಸ್ಥಾಪಕ ಜಯರಾಂ ಶೆಟ್ಟಿ, ಪ್ರಧಾನ ವ್ಯವಸ್ಥಾಪಕ ವಿ.ಪಿ. ಭಾಸ್ಕರನ್, ವಾಣಿಜ್ಯೋದ್ಯಮಿ ಕೃಷ್ಣಪ್ಪ, ಇಕ್ಬಾಲ್ ಮನೋಲೋಡಿ, ಮುರುಳಿ ಭಾಗವಹಿಸಿದ್ದರು.