ದೊಡ್ಡರಾಯಪೇಟೆ ಗಿರೀಶ್ ಕಾಂಗ್ರೆಸ್ ಸೇರ್ಪಡೆ
ಚಾಮರಾಜನಗರ: ತಾಲೂಕಿನ ದೊಡ್ಡರಾಯಪೇಟೆ ಗ್ರಾಪಂ ಸದಸ್ಯ ಹಾಗೂ ಪಿಎಸಿಸಿ ಬ್ಯಾಂಕ್ ಮಾಜಿ ಅಧ್ಯಕ್ಷ ದೊಡ್ಡರಾಯಪೇಟೆ ಗಿರೀಶ್, ಮಾಜಿ ಅಧ್ಯಕ್ಷ ಬಸವರಾಜು, ಮುಕುಂದ, ಡೇರಿ ಅಧ್ಯಕ್ಷ ಶಿವರುದ್ರಸ್ವಾಮಿ ಸೇರಿದಂತೆ ಗ್ರಾಮದ ಅನೇಕ ಮುಖಂಡರು ಸಂಸದ ಧ್ರುವನಾರಾಯಣ್ ಸಮ್ಮುಖ ಮಂಗಳವಾರ ಕಾಂಗ್ರೆಸ್ ಸೇರಿದರು.
ನಗರದ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ನಡೆದ ಸಮಾರಂಭದಲ್ಲಿ ಮುಖಂಡರನ್ನು ಸಂಸದ ಧ್ರುವ ಅವರು ಬಾವುಟ ನೀಡುವ ಮೂಲಕ ಪಕ್ಷಕ್ಕೆ ಸ್ವಾಗತಿಸಿದರು. ಕಾಂಗ್ರೆಸ್ ಸಾಮಾಜಿಕ ನ್ಯಾಯದಡಿಯಲ್ಲಿ ಎಲ್ಲಾ ವರ್ಗದವರ ಪ್ರೀತಿ ವಿಶ್ವಾಸ ಗಳಿಸಿರುವ ರಾಷ್ಟ್ರೀಯ ಪಕ್ಷವಾಗಿದೆ. ಕಳೆದ 10 ವರ್ಷಗಳ ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರ ಹಲವು ಜನಪರ ಯೋಜನೆಗಳನ್ನು ನೀಡಿದೆ. ಕ್ಷೇತ್ರದ ಅಭಿವೃದ್ಧಿಗೆ ಇನ್ನೂ ಹೆಚ್ಚಿನ ಅನುದಾನ ಬಿಡುಗಡೆ ಮಾಡಿಸುವ ಮೂಲಕ ಚಾಮರಾಜನಗರ ಲೋಕಸಭಾ ಕ್ಷೇತ್ರವನ್ನು ಅಭಿವೃದ್ಧಿ ಪಡಿಸಲಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಸ್ತುವಾರಿ ಸಚಿವ ಮಹದೇವಪ್ರಸಾದ್ ಜಿಲ್ಲೆಯ ಅಭಿವೃದ್ಧಿಗೆ ಪೂರಕವಾದ ಗ್ರಾನೈಟ್ ಪಾರ್ಕ್, ವೈದ್ಯಕೀಯ ಕಾಲೇಜು ಕಟ್ಟಡ ನಿರ್ಮಾಣ, ಕೌಶಲ್ಯ ತರಬೇತಿ ಕೇಂದ್ರ ಉದ್ಘಾಟನೆ ಹಾಗೂ ಜನಪರ ಕಾರ್ಯಕ್ರಮಗಳನ್ನು ನೀಡುತ್ತಿದ್ದಾರೆ ಎಂದು ಹೇಳಿದರು. ಗ್ರಾಮದ ಡೇರಿ ನಿರ್ದೇಶಕರಾದ ಜಯರಾಮು, ಮಹದೇವಸ್ವಾಮಿ, ಮುಖಂಡ ನಾಗೇಂದ್ರ, ರಾಜು, ಶಿವರಾಮು, ಅಂಗಡಿ ಮಹೇಶ್, ಮಂಜು, ಮುತ್ತುರಾಜು, ಬಸವರಾಜು, ಮಿಮಿಕ್ರಿ ಮಲ್ಲಣ್ಣ ಇತರರು ಪಕ್ಷಕ್ಕೆ ಸೇರ್ಪಡೆಯಾದವರು.
ನಾಳೆ ರಾಜೀವ್ ಗಾಂಧಿ ಕ್ರೀಡಾ ಅಭಿಯಾನಕ್ಕೆ ಚಾಲನೆ
ಚಾಮರಾಜನಗರ: ನೆಹರು ಯುವ ಕೇಂದ್ರವು ರಾಷ್ಟ್ರೀಯ ಯುವ ನಿಯಮ, ಹಾಗೂ ರಾಜೀವ್ಗಾಂಧಿ ಕ್ರೀಡಾ ಅಭಿಯಾನ ಚಾಲನಾ ಕಾರ್ಯಕ್ರಮವನ್ನು ನಗರದ ಜೆಎಸ್ಎಸ್ ಮಹಿಳಾ ಕಾಲೇಜಿನ ಸಭಾಂಗಣದಲ್ಲಿ ಫೆ. 28ರಂದು ಬೆಳಗ್ಗೆ 11ಗಂಟೆಗೆ ಹಮ್ಮಿಕೊಂಡಿದೆ. ಜಿಲ್ಲಾಧಿಕಾರಿ ಎ.ಎಂ.ಕುಂಜಪ್ಪ ಉದ್ಘಾಟನೆ ನೆರವೇರಿಸುವರು. ಶಾಸಕ ಸಿ.ಪುಟ್ಟರಂಗಶೆಟ್ಟಿ ಅಧ್ಯಕ್ಷತೆ ವಹಿಸುವರು, ಲೋಕಸಭಾ ಸದಸ್ಯ ಆರ್.ದ್ರುವನಾರಾಯಣ ರಾಷ್ಟ್ರೀಯ ಸದ್ಬಾವನ ಪ್ರತಿಜ್ಞಾವಿಧಿ ಭೋದಿಸುವರು. ಎಸ್ಪಿ ಪಿ.ರಾಜೇಂದ್ರ ಪ್ರಸಾದ್, ಜಿಪಂ. ಮುಖ್ಯಕಾರ್ಯನಿರ್ವಾಹಕ ಅಧಿಕಾರಿ ಕೆ.ಎಚ್. ನರಸಿಂಹಮೂರ್ತಿ ಪ್ರಾಚಾರ್ಯ ಎಂ.ಡಿ.ಪುಷ್ಪಾವತಿ, ಪ್ರೊ.ಎಂ.ಜಿ. ಶಿವಕುಮಾರ್ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.