ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಮೈಸೂರು

ನಾಳೆ ರಾಷ್ಟ್ರೀಯ ವಿಜ್ಞಾನ ದಿನ

Rashmi Kasaragodu
Updated On : 27 Feb 2014, 1:34 am

ಮೈಸೂರು: ಮೈಸೂರು ವಿವಿಯು ಫೆ. 28ರ ಬೆಳಗ್ಗೆ 10ಕ್ಕೆ ಸೆನೆಟ್ ಭವನದಲ್ಲಿ ರಾಷ್ಟ್ರೀಯ ವಿಜ್ಞಾನ ದಿನಾಚರಣೆ ಆಯೋಜಿಸಿದೆ. ಆರಿಜೀನ್ ಡಿಸ್ಕವರಿ ಟೆಕ್ನಾಲಜೀಸ್‌ನ ಹಿರಿಯ ಉಪಾಧ್ಯಕ್ಷ ಡಾ.ಎಚ್.ಎಸ್. ಸುಬ್ರಮಣ್ಯ ಅವರು ಔಷಧಿಗಳ ಆವಿಷ್ಕಾರ ಹೇಗೆ ಕುರಿತು ವಿಶೇಷ ಉಪನ್ಯಾಸ ನೀಡುವರು. ಮೈಸೂರು ವಿವಿ ಕುಲಪತಿ ರಂಗಪ್ಪ ಅಧ್ಯಕ್ಷತೆ ವಹಿಸುವರು. ಕುಲಸಚಿವ ಪ್ರೊ.ಸಿ. ಬಸವರಾಜು ಭಾಗವಹಿಸುವರು.
ಶಿವರಾತ್ರಿ ಪ್ರಯುಕ್ತಪೊಲೀಸರ ಎಚ್ಚರಿಕೆ
ನಗರದಲ್ಲಿ ಫೆ.27 ರಂದು ಶಿವರಾತ್ರಿ ಹಬ್ಬದ ಸಮಯದಲ್ಲಿ ಕೆಲವು ಯುವಕರು ಅನವಶ್ಯಕವಾಗಿ ಪ್ರಮುಖ ರಸ್ತೆಗಳಲ್ಲಿ ತಿರುಗಾಡುತ್ತಾ, ಮಹಿಳೆಯರನ್ನು  ಚುಡಾಯಿಸುತ್ತಾ, ಮಕ್ಕಳು, ವೃದ್ಧರನ್ನು ಕೀಟಲೆ ಮಾಡುತ್ತಾ, ಸಾರ್ವಜನಿಕರ ಶಾಂತಿಗೆ ಭಂಗ ತರುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವುದಾಗಿ ನಗರ ಪೊಲೀಸ್ ಆಯುಕ್ತ ಡಾ.ಎಂ.ಎ. ಸಲೀಂ ಎಚ್ಚರಿಸಿದ್ದಾರೆ. ರಾತ್ರಿ ಜಾಗರಣೆಯ ಸಮಯದಲ್ಲಿ ಮನೆಗಳ ಮುಂದಿರುವ ಹೂ ಕುಂಡಗಳನ್ನು ಒಡೆದು ಹಾಕುವುದು, ಹೂಗಳನ್ನು, ಹಣ್ಣು, ಎಳನೀರನ್ನು ಕೀಳುವುದು, ಬೋರ್ಡ್‌ಗಳನ್ನು ಬದಲಾವಣೆ ಮಾಡುವುದು, ರಸ್ತೆ ಮಧ್ಯೆ ಕಲ್ಲುಗಳನ್ನು ಇಡುವುದು, ಸಂಚಾರ ವ್ಯತ್ಯಯ ಉಂಟು ಮಾಡುವುದು, ರಸ್ತೆ ಮಧ್ಯೆ ವೀಡಿಯೋ ಚಲನಚಿತ್ರಗಳನ್ನು ಹಾಕುವುದು, ಅನುಮತಿ ಇಲ್ಲದೆ ಹೆಚ್ಚಿನ ಧ್ವನಿವರ್ಧಕಗಳನ್ನು ಹಾಕಿಕೊಂಡು ಸಾರ್ವಜನಿಕರ ಶಾಂತಿಗೆ ಭಂಗ ತರಬಾರದು. ದೇವಸ್ಥಾನದ ಬಳಿ ಸಾಲಿನಲ್ಲಿ ನಿಲ್ಲದೇ ನುಗ್ಗಲು ಪ್ರಯತ್ನಿಸುವುದು, ಅವಕಾಶವನ್ನು ದುರುಪಯೋಗಪಡಿಸಿಕೊಂಡು ಕಾನೂನು ಸುವ್ಯವಸ್ಥೆಗೆ ಭಂಗ ತರುವಂತಹ ಕೃತ್ಯಗಳಲ್ಲಿ ಭಾಗಿಗಳಾಗುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಅವರು ತಿಳಿಸಿದ್ದಾರೆ. ಶಿವರಾತ್ರಿ ಹಬ್ಬವನ್ನು ಶಾಂತಿಯುತವಾಗಿ ಆಚರಿಸಲು, ನಗರದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಕಾಪಾಡಲು ಪೊಲೀಸರೊಂದಿಗೆ ಸಹಕರಿಸುವಂತೆ ಅವರು ಕೋರಿದ್ದಾರೆ.
ಅರಮನೆ ಬಳಿ ಪಾರ್ಕಿಂಗ್ ವ್ಯವಸ್ಥೆ: ಫೆ.27ರಂದು ಮಹಾ ಶಿವರಾತ್ರಿ ಹಬ್ಬದ ಪ್ರಯುಕ್ತ ಬೆಳಗ್ಗೆ 6ರಿಂದ ಮೈಸೂರು ಅರಮನೆ ಕೋಟೆ ಆವರಣದಲ್ಲಿರುವ ತ್ರಿಣೇಶ್ವರ ದೇವಸ್ಥಾನದಲ್ಲಿ ಮೂಲ ದೇವರಿಗೆ ಪ್ರತಿ ವರ್ಷದಂತೆ ಈ ವರ್ಷವು ಸಹ ಚಿನ್ನದ ಕೊಳಗ (ಕವಚ) ತೊಡಿಸಿ ವಿಶೇಷ ಪೂಜಾ ಕಾರ್ಯಕ್ರಮಗಳು ನಡೆಯಲಿದೆ. ಈ ದಿನ ದೇವಸ್ಥಾನಕ್ಕೆ ವಾಹನದಲ್ಲಿ ಬರುವ ಭಕ್ತಾಧಿಗಳು ಅರಮನೆಯ ವರಹಾ ಗೇಟ್ ಕಡೆಯಿಂದ ಬರುವವರು ವರಹಾ ಗೇಟ್ ಬಳಿ ಪಾರ್ಕಿಂಗ್ ಸ್ಥಳದಲ್ಲಿ ವಾಹನಗಳನ್ನು ನಿಲ್ಲಿಸಬೇಕು. ಜಯಮಾರ್ತಾಂಡ ಗೇಟ್ ಕಡೆಯಿಂದ ಬರುವವರು ದೊಡ್ಡಕೆರೆ ಮೈದಾನದದಲ್ಲಿ ವಾಹನಗಳನ್ನು ನಿಲ್ಲಿಸಬೇಕು. ದೇವಸ್ಥಾನದಲ್ಲಿ ಸಾಲಿನಲ್ಲಿ ನಿಂತು ದೇವರ ದರ್ಶನ ಪಡೆಯುವುದು ಹಾಗೂ ಪೊಲೀಸರೊಂದಿಗೆ ಸಹಕರಿಸಬೇಕು ಎಂದು ಪೊಲೀಸ್ ಆಯುಕ್ತ ಡಾ.ಎಂ.ಎ. ಸಲೀಂ ಕೋರಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement