ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಮೈಸೂರು

ಪೋಲಿಯೊ ಮೊದಲ 2 ದಿನದಲ್ಲಿ ಶೆ. 100 ಪ್ರಗತಿ

Rashmi Kasaragodu
Updated On : 27 Feb 2014, 1:35 am

ಚಾಮರಾಜನಗರ: ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯು ಜಿಲ್ಲೆಯಲ್ಲಿ ಇತ್ತೀಚೆಗೆ ನಡೆಸಿದ 2ನೇ ಸುತ್ತಿನ ಪಲ್ಸ್ ಪೋಲಿಯೊ ಲಸಿಕೆ ಕಾರ್ಯಕ್ರಮದ ಮೊದಲ 2 ದಿನಗಳಲ್ಲಿ ಶೇ.100ರಷ್ಟು ಸಾಧನೆ ಮಾಡಲಾಗಿದೆ.
ಚಾಮರಾಜನಗರ ತಾಲೂಕಿನಲ್ಲಿ ಶೇ. 101ರಷ್ಟು, ಗುಂಡ್ಲುಪೇಟೆ ತಾಲೂಕಿನಲ್ಲಿ ಶೇ. 99ರಷ್ಟು, ಯಳಂದೂರು ತಾಲೂಕಿನಲ್ಲಿ ಶೇ. 97ರಷ್ಟು ಲಸಿಕೆ ನೀಡುವ ಸಾಧನೆಯಾಗಿದೆ.
ಚಾಮರಾಜನಗರ ತಾಲೂಕಿನ ಗ್ರಾಮೀಣ ಪ್ರದೇಶದಲ್ಲಿ ಶೇ. 103, ಪಟ್ಟಣ ಪ್ರದೇಶದಲ್ಲಿ ಶೆ. 97ರಷ್ಟು, ಗುಂಡ್ಲುಪೇಟೆ ತಾಲೂಕಿನ ಗ್ರಾಮೀಣ ಪ್ರದೇಶದಲ್ಲಿ ಶೇ.100, ಪಟ್ಟಣ ಪ್ರದೇಶದಲ್ಲಿ ಶೇ. 104, ಕೊಳ್ಳೇಗಾಲ ಗ್ರಾಮೀಣ ಪ್ರದೇಶದಲ್ಲಿ ಶೇ. 101, ಪಟ್ಟಣ ಪ್ರದೇಶದಲ್ಲಿ ಶೇ. 93, ಯಳಂದೂರು ತಾಲೂಕಿನ ಗ್ರಾಮೀಣ ಪ್ರದೇಶದಲ್ಲಿ ಶೇ. 96, ಪಟ್ಟಣ ಪ್ರದೇಶದಲ್ಲಿ ಶೇ. 101ರಷ್ಟು ಸಾಧನೆಯಾಗಿದೆ.
ಒಟ್ಟಾರೆ ಮೊದಲ 2 ದಿನಗಳ ಕಾರ್ಯಕ್ರಮದಲ್ಲಿ ಜಿಲ್ಲೆಯ 89742 ಮಕ್ಕಳಿಗೆ ಲಸಿಕೆ ನೀಡಲಾಗಿದ್ದು ಶೇ. 100ರಷ್ಟು ಪ್ರಗತಿಯಾಗಿದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಪಾಂಡುವಿಜಯನ್ ತಿಳಿಸಿದ್ದಾರೆ.



ಕಾಲೇಜು ವಿದ್ಯಾರ್ಥಿನಿಯರಿಗೆ ದ್ವಿಚಕ್ರ ವಾಹನ ನೀಡಲಿ: ಕುಂವೀ ಸಲಹೆ

ಚಾಮರಾಜನಗರ: ಶಾಲಾ ಮಕ್ಕಳಿಗೆ ಸೈಕಲ್ ನೀಡುವ ಮಾದರಿಯಲ್ಲೇ ಕಾಲೇಜು ವಿದ್ಯಾರ್ಥಿನಿಯರಿಗೆ ದ್ವಿಚಕ್ರ ವಾಹನ ನೀಡಲಿ ಎಂದು ಕೇಂದ್ರ ಸಾಹಿತ್ಯ ಪ್ರಶಸ್ತಿ ಪುರಸ್ಕೃತ ಸಾಹಿತಿ ಕುಂ. ವೀರಭದ್ರಪ್ಪ ಸಲಹೆ ನೀಡಿದರು.
ನಗರದ ಜೆಎಸ್‌ಎಸ್ ಮಹಿಳಾ ಕಾಲೇಜಿನಲ್ಲಿ ಕನ್ನಡ ವಿಭಾಗದ ವತಿಯಿಂದ ಆಯೋಜಿಸಿದ್ದ ವಿಶೇಷ ಉಪನ್ಯಾಸದಲ್ಲಿ ಮಾತನಾಡಿದ ಅವರು, ಸರ್ಕಾರ ಹೆಣ್ಣು ಮಕ್ಕಳ ಶಿಕ್ಷಣಕ್ಕೆ ಹೆಚ್ಚಿನ ಪ್ರೋತ್ಸಾಹ ನೀಡಬೇಕು. ಈ ನಿಟ್ಟಿನಲ್ಲಿ ಕಾಲೇಜು ವಿದ್ಯಾರ್ಥಿನಿಯರಿಗೆ ಕಾಲೇಜಿಗೆ ಹೋಗಲು ಅನುಕೂಲವಾಗುವಂತೆ ದ್ವಿಚಕ್ರ ವಾಹನ ನೀಡಲು ಮುಂದಾಗಬೇಕು ಎಂದರು.
ದೇಶದ ಅರ್ಥ ವ್ಯವಸ್ಥೆ ಸುಧಾರಣೆಯಾಗಬೇಕಾದರೆ ಮಹಿಳೆಯೊಬ್ಬರು ಆರ್ಥಿಕ ಸಚಿವರಾಗಬೇಕು. ಅರ್ಥ ವ್ಯವಸ್ಥೆ ಸರಿಪಡಿಸುವಲ್ಲಿ ಮಹಿಳೆಯರು ಪ್ರಮುಖ ಪಾತ್ರ ವಹಿಸಬಲ್ಲರು ಎಂದ ಅವರು, ಮಹಿಳೆ ಚೈತನ್ಯಶೀಲ ಸಂಸ್ಕೃತಿಯ ಪ್ರತೀಕ. ನಾಡು, ನುಡಿ ಜೀವನ ಸಂಸ್ಕೃತಿಯ ರಕ್ಷಣೆಯಲ್ಲಿ ಮಹಿಳೆಯ ಪಾತ್ರ ಅತ್ಯಂತ ಪ್ರಮುಖವಾದದ್ದು. ಒಂದು ಮನೆಯ ಆರ್ಥಿಕ ವ್ಯವಸ್ಥೆ ಸುಧಾರಣೆಗೊಂಡು ಸುಖೀ ಜೀವನ ನಿರ್ವಹಣೆ ಮಾಡುವಲ್ಲಿ ಹೆಣ್ಣಿನ ಪಾತ್ರ ಗಣನೀಯವಾದದ್ದು. ಇಂದು ಮಹಿಳೆಯರಿಲ್ಲದೆ ಸಮಾಜ, ಕುಟುಂಬವನ್ನು ಕಲ್ಪಿಸಿಕೊಳ್ಳುವುದೇ ಕಷ್ಟ ಎಂದರು.
ಹೆಣ್ಣು ಮಕ್ಕಳನ್ನು ಶಿಕ್ಷಣದಿಂದ ವಂಚಿತರನ್ನಾಗಿ ಮಾಡುವುದು ಅತ್ಯಂತ ಹೇಯ ಸಂಗತಿ. ಗುಣಾತ್ಮಕ ಶಿಕ್ಷಣವನ್ನು ಹೆಣ್ಣು ಮಕ್ಕಳಿಗೆ ನೀಡುವುದರಿಂದ ಸಮಾಜದಲ್ಲಿ ಪರಿವರ್ತನೆ ತರಲು ಸಾಧ್ಯ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು. ಈ ನಿಟ್ಟಿನಲ್ಲಿ ಜೆಎಸ್‌ಎಸ್  ಶಿಕ್ಷಣ ಸಂಸ್ಥೆ ಮಹಿಳೆಯರಿಗಾಗಿಯೇ ಶಾಲಾ ಕಾಲೇಜುಗಳನ್ನು ನಡೆಸುತ್ತಿರುವುದು ಶ್ಲಾಘನೀಯ ಎಂದರು.
ಸಮಾರಂಭದ ಅಧ್ಯಕ್ಷತೆಯನ್ನು ಜೆಎಸ್‌ಎಸ್ ಮಹಾ ವಿದ್ಯಾಪೀಠದ ಸಹಾಯಕ ನಿರ್ದೇಶಕ ಬಿ.ನಿರಂಜನ್ ವಹಿಸಿದ್ದರು. ಪ್ರಾಂಶುಪಾಲರಾದ ಪ್ರೊ.ಎಂ.ಡಿ. ಪುಷ್ಪಾವತಿ, ಉಪ ಪ್ರಾಂಶುಪಾಲ ಪ್ರೊ.ಎ.ಜಿ. ಶಿವಕುಮಾರ್,  ಉಮೇಶ್ ಸ್ವಾಗತಿಸಿದರು. ಜಮುನಾ ವಂದಿಸಿದರು, ಎನ್. ಮಹೇಶ್ವರಿ ನಿರೂಪಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement