ಮಾ. 1ರಂದು ನಂಜನಗೂಡಿಗೆ ಮುಖ್ಯಮಂತ್ರಿ
ಮೈಸೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಾ. 1ರಂದು ಜಿಲ್ಲೆಯಲ್ಲಿ ಪ್ರವಾಸ ಕೈಗೊಳ್ಳುವರು. ಅಂದು ಹೆಲಿಕಾಪ್ಟರ್ ಮೂಲಕ ಮಧ್ಯಾಹ್ನ 2.50ಕ್ಕೆ ನಂಜನಗೂಡು ತಾಲೂಕಿನ ನೆಸ್ಲೆ ಇಂಡಿಯಾ ಫ್ಯಾಕ್ಟರಿ ಅವರಣದ ಹೆಲಿಪ್ಯಾಡ್ಗೆ ಆಗಮಿಸುವರು. ಮಧ್ಯಾಹ್ನ 3ಕ್ಕೆ ನಂಜನಗೂಡು ವಿಧಾನಸಭಾ ಕ್ಷೇತ್ರದ ವಿವಿಧ ಅಭಿವೃದ್ಧಿ ಕಾಮಗಾರಿಗಳ ಶಿಲಾನ್ಯಾಸ, ಉದ್ಘಾಟನಾ ಸಮಾರಂಭ ಹಾಗೂ ಆಹಾರ ನಾಗರಿಕ ಸರಬರಾಜು ಇಲಾಖೆಯ ವತಿಯಿಂದ ಅನ್ನಭಾಗ್ಯ ಯೋಜನೆಯಡಿ ರಾಗಿ ವಿತರಣೆ ಕಾರ್ಯಕ್ರಮಕ್ಕೆ ಚಾಲನೆ ನೀಡುವರು. ಸಂಜೆ 5ಕ್ಕೆ ನೆಸ್ಲೆ ಇಂಡಿಯಾ ಫ್ಯಾಕ್ಟರಿ ಅವರಣದ ಹೆಲಿಪ್ಯಾಡ್ನಿಂದ ಹೆಲಿಕಾಪ್ಟರ್ ಮೂಲಕ ಬೆಂಗಳೂರು-ಜಕ್ಕೂರು ಏರೋ ಡ್ರೋಂಗೆ ತೆರಳುವರು.