ಸಂಸ್ಕಾರ ಭಾರತಿಯಿಂದ ಭರತ ಜಯಂತಿ ಆಚರಣೆ
ಮೈಸೂರು: ಸಂಸ್ಕಾರ ಭಾರತೀ ಮತ್ತು ಭಾರತೀಯ ನೃತ್ಯ ಕಲಾ ಪರಿಷತ್ತಿನ ಸಂಯುಕ್ತಾಶ್ರಯದಲ್ಲಿ ಇತ್ತೀಚೆಗೆ ಭರತಮುನಿ ಜಯಂತಿ ಆಚರಿಸಲಾಯಿತು.
ಜಗನ್ಮೋಹನ ಅರಮನೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಶಾಸಕ ಗೋ. ಮಧುಸೂದನ್, ಉದ್ಯಮಿ ಕೆ.ವಿ. ಮೂರ್ತಿ, ರೂಪಶ್ರೀ ಭಗವಾನ್, ಆಕಾಶವಾಣಿ ಕಾರ್ಯಕ್ರಮ ನಿರ್ವಾಹಕ ಜಿ.ಕೆ. ರವೀಂದ್ರಕುಮಾರ್, ಸಂಸ್ಕಾರ ಭಾರತಿ ಅಧ್ಯಕ್ಷ ಎಚ್.ಕೆ. ರಾಮನಾಥ, ಪ್ರಧಾನ ಕಾರ್ಯದರ್ಶಿ ಅ.ಚ. ಅಶೋಕಕುಮಾರ್, ಭಾರತೀಯ ನೃತ್ಯ ಕಲಾ ಪರಿಷತ್ತಿನ ಕಾರ್ಯದರ್ಶಿ ರಾಮಮೂರ್ತಿರಾವ್ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.
ನಂತರ ವಿದುಷಿ ದಿವ್ಯ ನವೀನ್, ಅನಿತಾ ಯತಿರಾಜ್, ಆರ್. ಶ್ರೀನಿವಾಸ್ ಮುಲ್ಲಾರ್, ರಮ್ಯಾ ಎನ್. ಮುರಳೀಧರ್ ಕೌತುಂ, ತುಳಸಿ ರಾಮಚಂದ್ರ, ಮಿತ್ರಾ ನವೀನ್, ಆನಂದ, ನೇತ್ರಾ ನಂದನ ಶಬ್ದಮ್, ಚೇತನಾ ರಾಧಾಕೃಷ್ಣ, ನಾಗಲಕ್ಷ್ಮೀ ನಾಗರಾಜ್, ವಿಜಯಾಮೂರ್ತಿ, ಕಣ್ಣನ್ ಪದಂ, ಅನಾಮಿಕಾ ಶಿವರಾಜ್ ಸಾಂಸ್ಕೃತಿಕ ಕಾರ್ಯಕ್ರಮ ನಡೆಸಿಕೊಟ್ಟರು.