ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಮೈಸೂರು

24x7 ಮೈಮುಲ್ ಮಾರಾಟ ಕೇಂದ್ರ

Rashmi Kasaragodu
Updated On : 28 Feb 2014, 1:10 am

ಕ.ಪ್ರ.ವಾರ್ತೆ    ಭೇರ್ಯ    ಫೆ. 27
ಗ್ರಾಮೀಣ ಪ್ರದೇಶದಲ್ಲಿ ದಿನದ 24 ಗಂಟೆ ಗ್ರಾಹಕರಿಗೆ ಹಾಲೂ ದೊರೆಯಲು ಮೈಸೂರು-ಚಾಮರಾಜನಗರ ಜಿಲ್ಲೆಗಳ 5 ತಾಲೂಕು ಕೇಂದ್ರಗಳಲ್ಲಿ ಮಾರಾಟ ಕೇಂದ್ರಗಳನ್ನು ತೆರೆಯಲಾಗಿದೆ ಎಂದು ಮೈಮುಲ್ ವ್ಯವಸ್ಥಾಪಕ ನಿರ್ದೇಶಕ ಸುರೇಶ್‌ಬಾಬು ತಿಳಿಸಿದರು. ಪಟ್ಟಣದ ಗ್ರಾಪಂ ವಾಣಿಜ್ಯ ಸಂಕೀರ್ಣದಲ್ಲಿ 24್ಢ7 ನಾಲ್ಕು ಲಕ್ಷ ವೆಚ್ಚದ ಹಾಲೂ ಮಾರಾಟ ಕೇಂದ್ರಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.  
ಮೈಮುಲ್ ವ್ಯಾಪ್ತಿಯ ನಂಜನಗೂಡು, ಎಚ್.ಡಿ. ಕೋಟೆ, ಕೆ.ಆರ್. ನಗರ, ಕೊಳ್ಳೇಗಾಲ, ಚಾಮರಾಜನಗರ ತಾಲೂಕು ಕೇಂದ್ರದಲ್ಲಿ ಈಗಾಗಲೇ 24್ಢ7 ಹಾಲೂ ಮಾರಾಟ ಕೇಂದ್ರವನ್ನು 40 ಲಕ್ಷ ವೆಚ್ಚದಲ್ಲಿ ತೆರೆಯಲಾಗಿದ್ದು, ಗ್ರಾಹಕರಿಗೆ ಉತ್ತಮ ಸೇವೆಯನ್ನು ನೀಡಲಾಗುತ್ತಿದೆ. ಹಾಲೂ, ಮೊಸರು, ಇತರೆ ನಂದಿನಿ ಉತ್ಪನ್ನಗಳನ್ನು ಸಹ ಈ ಮಾರಾಟ ಕೇಂದ್ರದಲ್ಲಿ ದೊರೆಯುತ್ತದೆ ಎಂದು ಹೇಳಿದರು.
ಮೈಮುಲ್ ಅಧ್ಯಕ್ಷ ಎನ್. ಮಹದೇವಪ್ಪ ಮಾತನಾಡಿ, ಸಾಗಾಣಿಕೆ ವೆಚ್ಚ ಕಡಿಮೆ ಮಾಡುವ ಉದ್ದೇಶದಿಂದ ತಾಲೂಕಿನ ಆಯ್ದ ಕೇಂದ್ರಗಳಲ್ಲಿ 24್ಢ7ನಂದಿನಿ ಮಾರಾಟ ಕೇಂದ್ರವನ್ನು ಆರಂಭಿಸಲಾಗುತ್ತಿದ್ದು, ಮುಂದಿನ ಬಜೆಟ್‌ನಲ್ಲಿ ಉಳಿದ ತಾಲೂಕುಗಳಲ್ಲಿ ಪ್ರಾರಂಭಿಸಲು ಚಿಂತನೆ ನಡೆಸಲಾಗಿದೆ ಎಂದು ನುಡಿದರು.
ಗ್ರಾಪಂ ಅಧ್ಯಕ್ಷೆ ಪುಟ್ಟತಾಯಮ್ಮ, ಉಪಾಧ್ಯಕ್ಷ ಸುದರ್ಶನ್, ಮೈಮುಲ್ ನಿರ್ದೇಶಕ ಎ.ಟಿ. ಸೋಮಶೇಖರ್, ಕುಮಾರ್, ನಂ. ಸಿದ್ದಪ್ಪ, ವಿಜಯಲಕ್ಷ್ಮೀ, ನಾಮ ನಿರ್ದೇಶಕಿ ಶಿವಗಾಮಿ, ಜಿಪಂ ಮಾಜಿ ಸದಸ್ಯ ಎಂ.ಟಿ. ಕುಮಾರ್, ತಾ. ಜೆಡಿಎಸ್ ಅಧ್ಯಕ್ಷ ಚಂದ್ರಶೇಖರ್, ಕಾಂಗ್ರೆಸ್ ಮುಖಂಡರಾದ ಮಂಜೇಗೌಡ, ಸಿ.ಪಿ. ರಮೇಶ್,  ಮಾರುಕಟ್ಟೆ ವ್ಯವಸ್ಥಾಪಕ ಮಲ್ಲಿಕಾರ್ಜುನ್, ವ್ಯವಸ್ಥಾಪಕ ನಾಗರಾಜೇಗೌಡ, ಉಪವ್ಯವಸ್ಥಾಪಕ ಸಣ್ಣತಮ್ಮೇಗೌಡ, ಹಾಲು ಉತ್ಪಾದಕರ ಸಂಘದ ಕಾರ್ಯದರ್ಶಿ ಲೋಕೇಶ್, ಮಹದೇವು, ನಂದಿನಿ ಮಾರಾಟ ಕೇಂದ್ರದ ವ್ಯವಸ್ಥಾಪಕಿ ಪ್ರತಿಮಾ ಲೋಕೇಶ್, ಉದ್ಯಮಿ ಕೃಷ್ಣ, ತಾ. ವಕೀಲರ ಸಂಘದ ಅಧ್ಯಕ್ಷ ಸತೀಶ್ ಶುಭ ಹಾರೈಸಿದರು.   

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement