ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಮೈಸೂರು

ಇಂದಿನಿಂದ 'ನಾಟಕ ಉತ್ತರ ಕರ್ನಾಟಕ' ಉತ್ಸವ

Rashmi Kasaragodu
Updated On : 28 Feb 2014, 1:12 am

ಮೈಸೂರು: ಹುಬ್ಬಳ್ಳಿಯ ಗುರು ಇನ್ಸ್‌ಟಿಟ್ಯೂಟ್ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಮತ್ತು ಸಿಎಫ್‌ಟಿಆರ್‌ಐ ಕನ್ನಡ ಸಹೃದಯ ಬಳಗ ಸಹಯೋಗದಲ್ಲಿ ಫೆ.28 ರಿಂದ ಮಾ.2 ರವರೆಗೆ ನಾಟಕ ಉತ್ತರಕ ಕರ್ನಾಟಕ- 2014 ಎಂಬ ಮೂರು ದಿನಗಳ ನಾಟಕ ಉತ್ಸವ ಆಯೋಜಿಸಿದೆ.
ಮೈಸೂರಿನ ಸಿಎಫ್‌ಆರ್‌ಟಿ ಆವರಣದಲ್ಲಿರುವ ಐಎಫ್‌ಟಿಟಿಸಿ ಸಭಾಂಗಣದಲ್ಲಿ ಫೆ.28ರ ಸಂಜೆ 6.30ಕ್ಕೆ ನಾಟಕ ಉತ್ಸವವನ್ನು ಪತ್ರಿಕೋದ್ಯಮಿ ರಾಜಶೇಖರ ಕೋಟಿ ಉದ್ಘಾಟಿಸಿವರು. ಸಿಎಫ್‌ಟಿಆರ್‌ಐ ಆಡಳಿತ ನಿಯಂತ್ರಣಾಧಿಕಾರಿ ಕೆ.ಆರ್. ಬಾಲಕೃಷ್ಣ ಅಧ್ಯಕ್ಷತೆ ವಹಿಸುವರು ಎಂದು ಗುರು ಇನ್ಸ್‌ಟಿಟ್ಯೂಟ್‌ನ ಅಧ್ಯಕ್ಷ ಯಶವಂತ ಸರದೇಶಪಾಂಡೆ ಗುರುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಇದೇ ವೇಳೆ ರಂಗಭೂಮಿ ಮತ್ತು ಸಾಂಸ್ಕೃತಿಕ ಕ್ಷೇತ್ರದಲ್ಲಿ ಸಾಧನೆ ಮಾಡಿರುವ ಉದಯಕುಮಾರ್, ದೀಪಕ್ ಮೈಸೂರು ಮತ್ತು ರವೀಂದ್ರ ಜೋಶಿ ಅವರನ್ನು ಸನ್ಮಾನಿಸಲಾಗುವುದು ಎಂದರು.
ಫೆ.28 ರಂದು ರಾಶಿಚಕ್ರ- ಏಕವ್ಯಕ್ತಿ ಹಾಸ್ಯ ರಂಗಪ್ರಯೋಗ, ಮಾ.1 ರಂದು ಕೈಲಾಸಂ ಕೀಚಕ ಹಾಗೂ ಮಾ.2 ರಂದು ಆಲ್ ದಿ ಬೆಸ್ಟ್- ಸುಂದರ ಕನ್ನಡ ನಗೆ ನಾಟಕ ಪ್ರದರ್ಶಿಸಲಾಗುವುದು. ಪ್ರತಿದಿನ ಸಂಜೆ 6.30ಕ್ಕೆ ಪ್ರದರ್ಶನ ಇರುತ್ತದೆ. ಆಹ್ವಾನ ಪತ್ರ ಇದ್ದವರಿಗೆ ಮಾತ್ರ ಪ್ರವೇಶ ಇರುತ್ತದೆ. ಆಮಂತ್ರಣ ಪತ್ರಗಳಿಗಾಗಿ ಮೊ. 97391 70776, 89701 21745 ಸಂಪರ್ಕಿಸಬಹುದು ಎಂದು ಅವರು ಹೇಳಿದರು. ನಾಟಕ ಉತ್ಸವ ಅಂಗವಾಗಿ ಮಾ.1ರ ಮಧ್ಯಾಹ್ನ 2ಕ್ಕೆ ಡಿ. ಬನುಮಯ್ಯ ಸಂಜೆ ಸ್ವತಂತ್ರ ಪಿಯು ಕಾಲೇಜು ಆವರಣದಲ್ಲಿ ಆಲ್ ದಿ ಬೆಸ್ಟ್ ನಾಟಕ ಪ್ರದರ್ಶನ ಏರ್ಪಡಿಸಲಾಗಿದ್ದು, ಪ್ರವೇಶ ಉಚಿತ ಎಂದು ತಿಳಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement