ಕೈಗಾರಿಕಾ ಸಂಘಕ್ಕೆ ವಿದೇಶಿ ನಿಯೋಗ ಭೇಟಿ, ವಿನಿಮಯ
ಮೈಸೂರು: ನಗರದ ಕೆಆರ್ಎಸ್ ರಸ್ತೆಯಲ್ಲಿರುವ ಮೈಸೂರು ಕೈಗಾರಿಕೆಗಳ ಸಂಘಕ್ಕೆ 20 ಮುಂದುವರೆಯುತ್ತಿರುವ ರಾಷ್ಟ್ರಗಳ 27 ಮಂದಿಯಿದ್ದ ಪ್ರತಿನಿಧಿಗಳ ನಿಯೋಗ ಗುರುವಾರ ಭೇಟಿ ನೀಡಿತು. ಉದ್ದಿಮೆ ಮತ್ತು ಕೌಶಲಾಭಿವೃದ್ಧಿ ಕುರಿತ 8 ವಾರಗಳ ತರಬೇತಿ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಆಗಮಿಸಿರುವ ಈ ನಿಯೋಗವನ್ನು ಹೈದರಾಬಾದ್ನಲ್ಲಿರುವ ರಾಷ್ಟ್ರೀಯ ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಉದ್ದಿಮೆಗಳ ಸಂಸ್ಥೆಯು ಮೈಸೂರಿಗೆ ಕರೆ ತಂದಿದೆ.
ಸಂಘವು ಕೈಗಾರಿಕೆಗಳಿಗೆ ನೀಡುತ್ತಿರುವ ಸಹಕಾರ, ಕೈಗಾರಿಕೆಗಳ ಅಭಿವೃದ್ಧಿಗೆ ಒತ್ತು ಕುರಿತು ನಿಯೋಗದವರು ಮಾಹಿತಿ ಪಡೆದರು. ಸಂಘದ ಅಧ್ಯಕ್ಷ ಪಿ. ವಿಶ್ವನಾಥ್, ಪ್ರಧಾನ ಕಾರ್ಯದರ್ಶಿ ಸುರೇಶ್ಕುಮಾರ್ ಜೈನ್, ಜಂಟಿ ಕಾರ್ಯದರ್ಶಿ ಸತೀಶ್, ಖಜಾಂಚಿ ಭೈರೇಗೌಡ, ವಿಟಿಪಿಸಿ ಉಪ ನಿರ್ದೇಶಕ ವರದರಾಜ್, ಉದ್ಯಮಿ ಸದಾಶಿವ, ಪುಟ್ಟಸ್ವಾಮಿ, ಪುರುಷೋತಮ್, ಅನಿಲ್ ಬಿಜಲಾನಿ, ಅಮಿರ್ ವಾಗ್, ಅರುಣಾದೇವಿ ಅವರೊಂದಿಗೆ ಸಂವಾದ ಸಹ ನಡೆಸಿ ಉದ್ದಿಮೆಗಳ ಬಗ್ಗೆ ಮಾಹಿತಿ ಸಂಗ್ರಹಿಸಿದರು.
ಮಲೇಷಿಯಾ, ಲಾವೋಸ್, ಇರಾಕ್, ತಾಂಜನಿಯಾ, ಜಿಂಬಾಬ್ವೆ, ಈಥೋಪಿಯಾ, ದಕ್ಷಿಣ ಆಫ್ರಿಕಾ, ನೇಪಾಳ, ಲಿಬೀರಿಯಾ, ಕಿರ್ಗಿಸ್ತಾನ್, ಇರಾನ್, ಮ್ಯಾನ್ಮಾರ್, ನೈಜೀರಿಯಾ, ಮಾರಿಷಸ್, ನೈಜರ್, ಜಾಂಬಿಯಾ, ತಜಿಕಿಸ್ತಾನ್, ಶ್ರೀಲಂಕಾ ದೇಶಗಳ ಪ್ರತಿನಿಧಿಗಳು ನಿಯೋಗದಲ್ಲಿ ಇದ್ದಾರೆ