ಗಗನ್ದೀಪ್ಗೆ ಉತ್ತಮ ಸಾಧನೆ ಪ್ರಶಸ್ತಿ, ಅಭಿನಂದನೆ
ಮೈಸೂರು: ಶ್ರೀ ಕಾವೇರಿ ವಿದ್ಯಾಸಂಸ್ಥೆಯ ವಾರ್ಷಿಕೋತ್ಸವದಲ್ಲಿ ಶಾಲೆಯ 6ನೇ ತರಗತಿ ವಿದ್ಯಾರ್ಥಿ ಎ. ಗಗನ್ದೀಪ್ಗೆ 2012-13ನೇ ಸಾಲಿನ ಉತ್ತಮ ಸಾಧನೆ ಪ್ರಶಸ್ತಿ ನೀಡಿ ಅಭಿನಂದಿಸಲಾಯಿತು. ಕರಾಟೆಯಲ್ಲಿ ಚಿನ್ನ, ಬೆಳ್ಳಿ ಮತ್ತು ಕಂಚಿನ ಪದಕ ಪಡೆದ ಗಗನ್ದೀಪ್ ಕಿಕ್ ಬಾಕ್ಸಿಂಗ್ ತರಬೇತಿ ಪಡೆಯುತ್ತಿದ್ದು, ಮಹಾರಾಷ್ಟ್ರದಲ್ಲಿ ನಡೆದ 17ನೇ ಜ್ಯೂನಿಯರ್ ಮತ್ತು 18ನೇ ವಾಕೊ- ಇಂಡಿಯಾ ಕ್ಯಾಡೆಟ್ ಮತ್ತು ಹಿರಿಯ ನ್ಯಾಷನಲ್ ಕಿಕ್ ಬಾಕ್ಸಿಂಗ್ 2013-14ರ ಚಾಂಪಿಯನ್ಷಿಪ್ನಲ್ಲಿ ಕರ್ನಾಟಕವನ್ನು ಪ್ರತಿನಿಧಿಸಿ 32 ಕೆ.ಜಿ. ತೂಕದೊಳಗಿನ ಸ್ಪರ್ಧೆಯಲ್ಲಿ ಕಂಚಿನ ಪದಕ ಪಡೆದಿದ್ದಾನೆ.
ಕನಕದಾಸನಗರ ನಿವಾಸಿ ವಕೀಲ ಪಿ.ಒ. ಆದಿನಾರಾಯಣ ಮತ್ತು ಚಂದ್ರಕಲಾ ಅವರ ಪುತ್ರನಾದ ಗಗನ್ದೀಪ್ ಕಿಕ್ ಬಾಕ್ಸಿಂಗ್ ಸಂಘದ ಮುಖ್ಯ ತರಬೇತುದಾರ ರವಿ ಮತ್ತು ಸಹಾಯಕ ತರಬೇತುದಾರ ಗುರು ಅವರಲ್ಲಿ ಬಾಕ್ಸಿಂಗ್ ತರಬೇತಿ ಪಡೆಯುತ್ತಿದ್ದಾನೆ.