ಬಿಎಸ್ವೈ ಹುಟ್ಟುಹಬ್ಬ
ಟಿ. ನರಸೀಪುರ: ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ಅವರು ನಾಡು ಕಂಡಂತಹ ರೈತಪರ ಹೋರಾಟಗಾರ ಹಾಗೂ ಮುತ್ಸದ್ಧಿ ರಾಜಕಾರಣಿ ಎಂದು ಜಿಪಂ ಮಾಜಿ ಅಧ್ಯಕ್ಷ ಕಾ.ಪು. ಸಿದ್ದವೀರಪ್ಪ ಹೇಳಿದರು.
ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ಗುರುವಾರ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ 72ನೇ ವರ್ಷದ ಹುಟ್ಟುಹಬ್ಬದ ಪ್ರಯುಕ್ತ ರೋಗಿಗಳಿಗೆ ಹಣ್ಣು ಹಂಪಲು ವಿತರಿಸಿ ಮಾತನಾಡಿದ ಅವರು, ಶಿವರಾತ್ರಿ ಹಬ್ಬದಂದು ಪರಮ ದೈವ ಭಕ್ತರಾದ ಅವರ ಜನ್ಮ ದಿನ ನಡೆಯುತ್ತಿರುವು ರಾಜ್ಯಕ್ಕೆ ಮತ್ತು ಜನತೆಗೆ ಶುಭ ಸೂಚನೆಯಾಗಿದೆ. ಬಿಎಸ್ವೈ ಅವರಿಗೆ ರಾಜಕೀಯ ಅಧಿಕಾರ ಸಿಗಲಿದೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು.
ಮೃಗಾಲಯ ಪ್ರಾಧಿಕಾರದ ಮಾಜಿ ಅಧ್ಯಕ್ಷ ಎಂ. ನಂಜುಂಡಸ್ವಾಮಿ, ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ತೋಟದಪ್ಪ ಬಸವರಾಜು, ಬಿಜೆಪಿ ಹಿರಿಯ ಮುಖಂಡ ಕರೋಹಟ್ಟಿ ಮಹದೇವಯ್ಯ, ಜಿಲ್ಲಾ ಉಪಾಧ್ಯಕ್ಷ ಚಿನ್ನಂಬಳ್ಳಿ ಮಂಜುನಾಥ್, ವರುಣ ಪ್ರಧಾನ ಕಾರ್ಯದರ್ಶಿ ವೆಂಕಟರಮಣಶೆಟ್ಟಿ, ಬೆನಕನಹಳ್ಳಿ ಡೇರಿ ಅಧ್ಯಕ್ಷ ಸೋಮಶಂಕರ್, ಪಪಂ ಮಾಜಿ ಸದಸ್ಯ ಶಿವರಾಜು, ಮುಖಂಡ ಹಾರೋಪುರ ಶಿವಣ್ಣ, ಎ.ಎನ್. ರಂಗುನಾಯ್ಕ, ವಾಟಾಳು ಮಹದೇವಪ್ಪ, ವಡ್ಡರಹುಂಡಿ ಮಲ್ಲಿಕಾರ್ಜುನಸ್ವಾಮಿ, ಕಾರ್ಯ ಶೇಖರ್, ಆಲಗೂಡು ಕುಮಾರ್, ಡ್ರೈವರ್ ನಾಗರಾಜು, ತುಂಬಲ ನಂದೀಶ್ ಇದ್ದರು.