ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಮೈಸೂರು

ಮಾ.2 ಗಾಣಿಗರ ವಿದ್ಯಾರ್ಥಿನಿಲಯ ಕಟ್ಟಡ ಕಾಮಗಾರಿ ಶಂಕುಸ್ಥಾಪನೆ

Rashmi Kasaragodu
Updated On : 28 Feb 2014, 1:10 am

ಮೈಸೂರು: ನಗರದ ಸರಸ್ವತಿಪುರಂ 6ನೇ ಮುಖ್ಯರಸ್ತೆಯಲ್ಲಿರುವ ಜ್ಯೋತಿಪಣ ಯುವಜನ ಸಂಘದ ಗಾಣಿಗರ ವಿದ್ಯಾರ್ಥಿನಿಲಯದ ಹೊಸ ಕಟ್ಟಡ ಕಾಮಗಾರಿ ಶಂಕುಸ್ಥಾಪನೆ ಸಮಾರಂಭ ಮಾ.2ರ ಬೆಳಗ್ಗೆ 11ಕ್ಕೆ ಆಯೋಜಿಸಲಾಗಿದೆ.
ಕಂದಾಯ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ವಿ. ಶ್ರೀನಿವಾಸಪ್ರಸಾದ್ ಕಾರ್ಯಕ್ರಮ ಉದ್ಘಾಟಿಸುವರು. ಮಾಜಿ ಸಚಿವ ಬಿ.ಜೆ. ಪುಟ್ಟಸ್ವಾಮಿ, ಸಂಸದ ಎಚ್. ವಿಶ್ವನಾಥ್ ಅವರು ಗುದ್ದಲಿಪೂಜೆ ಮತ್ತು ಶಂಕುಸ್ಥಾಪನೆ ನೆರವೇರಿಸುವರು ಎಂದು ಜ್ಯೋತಿಪಣ ಯುವಜನ ಸಂಘದ ಅಧ್ಯಕ್ಷ ಕೆ.ಆರ್. ಚನ್ನಕೇಶವ ಶೆಟ್ಟರು ಗುರುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು. ಶಾಸಕರಾದ ವಾಸು, ಸಿದ್ದರಾಜು, ಸಿ.ಎಚ್. ವಿಜಯಶಂಕರ್, ಆರ್. ಧರ್ಮಸೇನ, ಮಾಜಿ ಮೇಯರ್ ಅನಂತು, ಪಾಲಿಕೆ ಸದಸ್ಯ ಆರ್. ಲಿಂಗಪ್ಪ ಅತಿಥಿಗಳಾಗುವರು. ಇದೇ ವೇಲೆ ಕಟ್ಟಡ ನಿರ್ಮಾಣಕ್ಕೆ ತಲಾ 10 ಲಕ್ಷ ರು. ಅನುದಾನ ನೀಡಿರುವ ಬಿ.ಜೆ. ಪುಟ್ಟಸ್ವಾಮಿ ಮತ್ತು ಎಚ್. ವಿಶ್ವನಾಥ್ ಅವರನ್ನು ಸನ್ಮಾನಿಸಲಾಗುವುದು ಎಂದರು.
ಗಾಣಿಗ ಜನಾಂಗದ ಅಭಿವೃದ್ಧಿಗಾಗಿ ಗಾಣಿಗ ನಿಗಮ ಸ್ಥಾಪಿಸಿ, 50 ಕೋಟಿ ರು. ಅನುದಾನ ಮೀಸಲಿಡಬೇಕು. ಜನಾಂಗದ ಯುವಕರು ಸ್ವಯಂ ಉದ್ಯೋಗ ಮಾಡಲು ಸಾಲ ಸೌಲಭ್ಯ ಒದಗಿಸಬೇಕು. ಮೈಸೂರು ಭಾಗದಲ್ಲಿ ಗಾಣಿಗ ಸಮುದಾಯ ಭವನ ನಿರ್ಮಿಸಲು ಸೂಕ್ತವಾದ ಜಾಗ ಒದಗಿಸಬೇಕು. ಜನಾಂಗದ ಮುಖಂಡ ಮಾಜಿ ಮೇಯರ್ ಅನಂತು ಅವರಿಗೆ ವಿಧಾನಪರಿಷತ್ ಸದಸ್ಯರ ಸ್ಥಾನ ನೀಡಬೇಕು ಎಂದು ಅವರು ಒತ್ತಾಯಿಸಿದರು.
ಜ್ಯೋತಿಪಣ ಯುವಜನ ಸಂಘದ ಕಾರ್ಯಾಧ್ಯಕ್ಷ ಜಿ. ಯದುಕುಮಾರ್, ಕಾರ್ಯದರ್ಶಿ ಎಸ್. ವೆಂಕಟೇಶ್, ಖಜಾಂಚಿ ಎಂ.ವಿ. ಸ್ವಾಮಿ, ಕಾರ್ಯಕಾರಿ ಸಮಿತಿ ಸದಸ್ಯ ಆರ್. ರಘು ಇತರರು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement